12 ಕಿಲೋ ಗ್ರಾಂ ಮಾದಕ ವಸ್ತುವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದಲ್ಲಿ ಭಾರತೀಯ ವ್ಯಕ್ತಿಯೊಬ್ಬನಿಗೆ ಮಲೇಷ್ಯಾ ಹೈಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿದೆ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ.
ಹಬೀಬ್ ನಾಸ್ತಾರ್ ಅಬ್ದುಲ್ ಮುತಾಲಿಫ್(51) 2009ರ ಮಾರ್ಚ್ ತಿಂಗಳಿನಲ್ಲಿ ಭಾರತದಿಂದ ಮಲೇಷ್ಯಾದ ಪೆನಾಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಸಂದರ್ಭದಲ್ಲಿ ತಪಾಸಣೆ ನಡೆಸಿದಾಗ, ಮಾದಕ ದ್ರವ್ಯ ಪತ್ತೆಯಾಗಿತ್ತು.
ತಾನು ಮಲೇಷ್ಯಾದ ಖಾಯಂ ನಿವಾಸಿ ಎಂಬುದಾಗಿಯೂ ಹಬೀಬ್ ಸೆರೆಸಿಕ್ಕ ವೇಳೆ ಪೊಲೀಸರಿಗೆ ತಿಳಿಸಿದ್ದ. ಆದರೆ ತನಗೆ ವ್ಯಕ್ತಿಯೊಬ್ಬ ಬ್ಯಾಗ್ ನೀಡಿದ್ದು ಅದರಲ್ಲಿ ಏನಿದೆ ಎಂಬುದು ತನಗೆ ತಿಳಿದಿರಲಿಲ್ಲವಾಗಿತ್ತು ಎಂದು ಸಮಜಾಯಿಷಿ ನೀಡಿದ್ದ.
ಆದರೆ ಹೈಕೋರ್ಟ್‌ನಲ್ಲಿ ವಿಚಾರಣೆ ವೇಳೆ ಹಬೀಬ್ ಪರ ವಕೀಲರು ಇದೇ ವಾದವನ್ನು ಮಂಡಿಸಿದಾಗ, ನ್ಯಾಯಾಧೀಶರು ಆ ಕಾರಣವನ್ನು ತಿರಸ್ಕರಿಸಿ ಮರಣದಂಡನೆ ಶಿಕ್ಷೆ ವಿಧಿಸಿದ್ದಾರೆ.
ಮಾದಕ ವಸ್ತು ಕಳ್ಳಸಾಗಣೆ ಅಪರಾಧದಲ್ಲಿ ಸಿಕ್ಕಿ ಬಿದ್ದು, ಆರೋಪ ಸಾಬೀತಾದಲ್ಲಿ ಗಲ್ಲುಶಿಕ್ಷೆ ನೀಡುವುದು ಮಲೇಷ್ಯಾದ ಕಾನೂನು. ಆ ನಿಟ್ಟಿನಲ್ಲಿ ಹಬೀಬ್‌ಗೆ ಗಲ್ಲುಶಿಕ್ಷೆ ನೀಡಿದ್ದಾರೆ.