ಅಫ್ಘಾನ್‌ನಿಂದ ಪಾಕ್‌ಗೆ ಬಾಂಬ್ ಸ್ಮಗ್ಲಿಂಗ್ ಆಗ್ತಿದೆ: ರೆಹಮಾನ್
ಇಸ್ಲಾಮಾಬಾದ್, ಶುಕ್ರವಾರ, 26 ನವೆಂಬರ್ 2010( 17:14 IST )
ಪಾಕಿಸ್ತಾನದಲ್ಲಿ ನಡೆದಿರುವ ಬಾಂಬ್ ದಾಳಿಯಲ್ಲಿ ಉಪಯೋಗಿಸಿರುವ ಸ್ಫೋಟಕಗಳು ನೆರೆಯ ಅಫ್ಘಾನಿಸ್ತಾನದಿಂದ ಸ್ಮಗ್ಲಿಂಗ್ ಆಗಿ ದೇಶಕ್ಕೆ ಬಂದಿರುವುದಾಗಿ ಪಾಕಿಸ್ತಾನ ಆರೋಪಿಸಿದ್ದು, ಆದರೂ ಗಡಿಭಾಗದಲ್ಲಿ ಬಂಡುಕೋರರ ಅಟ್ಟಹಾಸ ಮಟ್ಟ ಹಾಕಲು ಅಮೆರಿಕ ಪಡೆ ಶ್ರಮಿಸುತ್ತಿರುವುದಾಗಿ ತಿಳಿಸಿದೆ.
ಎಲ್ಲಾ ಐಇಡಿಗಳು ನಿಜವಾಗಿಯೂ ಅಫ್ಘಾನಿಸ್ತಾನದಿಂದ ಪಾಕಿಸ್ತಾನಕ್ಕೆ ರವಾನೆಯಾಗಿರುವುದಾಗಿ ಪಾಕಿಸ್ತಾನ ಆಂತರಿಕ ಸಚಿವ ರೆಹಮಾನ್ ಮಲಿಕ್ ಅವರು ರಸ್ತೆ ಬದಿಯ ಬಾಂಬ್ ಸ್ಫೋಟ ಬೆದರಿಕೆಯ ಕುರಿತ ರಾಷ್ಟ್ರೀಯ ಸಮ್ಮೇಳನ ಉದ್ದೇಶಿಸಿ ಮಾತನಾಡಿದರು.
ನೆರೆಯ ಅಫ್ಘಾನಿಸ್ತಾನದ ಗಡಿಭಾಗದಿಂದ ಉಗ್ರರು ಶಸ್ತ್ರಾಸ್ತ್ರ ಮತ್ತು ಸ್ಫೋಟಕದೊಂದಿಗೆ ಪಾಕಿಸ್ತಾನದೊಳಕ್ಕೆ ಬರುತ್ತಿರುವುದಾಗಿ ಆರೋಪಿಸಿದರು. ಈ ಬಗ್ಗೆ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಪರಸ್ಪರ ಸಂಬಂಧ ಸಂಶಯದಲ್ಲಿಯೇ ಮುಂದುವರಿದಿದ್ದು, ಆದರೂ ಉಭಯ ದೇಶಗಳ ಸಂಬಂಧ ಉತ್ತಮವಾಗುತ್ತಿರುವುದಾಗಿ ತಿಳಿಸಿದರು.