ಬ್ರಿಟನ್ ಮಾಜಿ ಪ್ರಧಾನಿ ಗೊರ್ಡೊನ್ ಬ್ರೌನ್ ಅಧಿಕಾರ ಅವಧಿಯಲ್ಲಿ ಸರಕಾರ ದುರ್ಬಲ ಹಾಗೂ ಅಸ್ಥಿರವಾಗಿತ್ತು ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅಡಳಿತ ಅಧಿಕಾರಿಗಳು ಹೇಳಿದ್ದಾರೆ.
ಡೈಲಿ ಎಕ್ಸ್‌ಪ್ರೆಸ್ ಪತ್ರಿಕೆಯ ಪ್ರಕಾರ, ಬ್ರೌನ್ ಸರಕಾರ ಗುಪ್ತಚರ ಇಲಾಖೆಗೆ ಸಂಬಂಧಿಸಿದ ವ್ಯವಹಾರಗಳ ನಿರ್ವಹಣೆಯಲ್ಲಿ ವಿಫಲವಾಗಿತ್ತು ಎಂದು ಮೂಲಗಳು ತಿಳಿಸಿವೆ.
ಬ್ರಿಟನ್‌ನಲ್ಲಿರುವ ಸಮ್ಮಿಶ್ರ ಸರಕಾರ ದುರ್ಬಲವಾಗಿದೆ. ಪ್ರಸ್ತುತ ಪ್ರಧಾನಿಯಾಗಿರುವ ಡೇವಿಡ್ ಕ್ಯಾಮರೂನ್ ಇದೀಗ ವಿರೋಧ ಪಕ್ಷಗಳಿಂದ ತರಾಟೆಗೊಳಗಾಗುವಂತಹ ಸ್ಥಿತಿ ಎದುರಾಗಿದೆ ಎಂದು ಅಮೆರಿಕ ಅಡಳಿತಕ್ಕೆ ಮಾಹಿತಿ ಒದಗಿಸಿದ್ದಾರೆ.