ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅನೈತಿಕ ಸಂಬಂಧ-ಪಾಕ್ ಮಹಿಳೆ ಮೂಗನ್ನೇ ಕತ್ತರಿಸಿ ಹಾಕಿದ್ರು! (Pakistan | nose chopped-off | extra-marital affair | Islamabad)
Bookmark and Share Feedback Print
 
ನೆರೆಮನೆಯವನ ಜತೆ ಅಕ್ರಮ ಸಂಬಂಧ ಹೊಂದಿದ್ದ ಪಾಕಿಸ್ತಾನಿ ಮಹಿಳೆಯೊಬ್ಬಳ ಮೂಗು ಮತ್ತು ತಲೆ ಕೂದಲನ್ನು ಕತ್ತರಿಸಿ ಹಾಕಿರುವ ಅಮಾನವೀಯ ಘಟನೆ ಇಲ್ಲಿನ ಗುಜ್ರಾನ್‌ವಾಲಾ ನಗರದಲ್ಲಿ ನಡೆದಿದೆ.

ಮಹಿಳೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆಂಬ ಕಾರಣಕ್ಕೆ ಆಕೆಯ ಭಾವ ಅವಳ ಮೂಗು ಮತ್ತು ತಲೆಕೂದಲನ್ನು ಕತ್ತರಿಸಿ ಹಾಕಿದ್ದಾನೆ. ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ದಿ ಎಕ್ಸ್‌ಪ್ರೆಸ್ ಟ್ರೈಬ್ಯೂನ್ ದೈನಿಕ ವರದಿ ಮಾಡಿದೆ.

ಗುಜ್ರಾನ್‌ವಾಲಾ ನಗರದ ಅವಾಲಾಖಾ ಬೈಕೆ ನಿವಾಸಿ ಆಸಿಯಾ ಬೀಬಿ ಎಂಬಾಕೆಯನ್ನು ಮೂರು ದಿನಗಳ ಕಾಲ ಕೋಣೆಯೊಂದರಲ್ಲಿ ಕೂಡಿ ಹಾಕಿದ್ದರು. ಈ ಸಂದರ್ಭದಲ್ಲಿ ಭಾವ ಅನ್ವರ್, ಆಕೆಯ ಪತ್ನಿ ಕಾಲ್‌ಸೂಮ್, ಮಕ್ಕಳಾದ ವಾಕಸ್, ಅವೈಸ್ ಸೇರಿಕೊಂಡು, ಆಸಿಯಾಳ ಮೂಗನ್ನು ಕತ್ತರಿಸಿ, ತಲೆಕೂದಲನ್ನು ಬೋಳಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಬಗ್ಗೆ ನೆರೆಹೊರೆಯವರು ಪೊಲೀಸರು ಮಾಹಿತಿ ನೀಡಿದಾಗ, ಸ್ಥಳಕ್ಕೆ ಭೇಟಿ ನೀಡಿದ್ದರು. ಆಗ ಆಕೆಯ ಸ್ಥಿತಿ ಗಂಭೀರವಾಗಿತ್ತು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ,ಚಿಕಿತ್ಸೆ ನೀಡಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಆಕೆಗೆ ಚಿಕಿತ್ಸೆ ನೀಡುತ್ತಿದ್ದು, ಕೆಲವು ದಿನಗಳ ಬಳಿಕ ಪೂರ್ಣ ಗುಣಮುಖಳಾಗುವ ನಿರೀಕ್ಷೆ ಇರುವುದಾಗಿ ಮೆಡಿಕಲ್ ಸೂಪರಿಟೆಂಡೆಂಟ್ ಅಜಾಮ್ ಶೇಕ್ ತಿಳಿಸಿದ್ದಾರೆ.

ಆಕೆ ಬೇರೊಬ್ಬನ ಜತೆ ಅನೈತಿಕ ಸಂಬಂಧ ಇಟ್ಟಕೊಂಡಿದ್ದಳು. ಹಾಗಾಗಿ ಆಕೆಗೆ ಈ ಶಿಕ್ಷೆ ನೀಡಲಾಗಿದೆ. ತಾನು ಮಾಡಿದ ತಪ್ಪಿಗೆ ಇದೇ ಶಿಕ್ಷೆ ಎಂಬುದು ಆಕೆಗೆ ತಿಳಿಯಬೇಕು ಎಂದು ಆರೋಪಿ ಅನ್ವರ್ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಆಕೆ ಮಾಡಿದ ಕೆಲಸಕ್ಕೆ ಸ್ಥಳದಲ್ಲೇ ಕೊಂದು ಹಾಕಬೇಕಿತ್ತು ಎಂಬುದಾಗಿಯೂ ಆತ ಕಿಡಿಕಾರಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ