ಒಂಬತ್ತು ಮಂದಿ ಖಾಸಗಿ ಭದ್ರತಾ ಗಾರ್ಡ್ಸ್‌ಗಳನ್ನು ಶಸ್ತ್ರಾಸ್ತ್ರಧಾರಿ ವ್ಯಕ್ತಿಯೊಬ್ಬ ಅಪಹರಿಸಿಕೊಂಡು ಹೋಗಿರುವ ಘಟನೆ ಕಾಬೂಲ್ ಪ್ರಾಂತ್ಯದಲ್ಲಿ ನಡೆದಿರುವುದಾಗಿ ಅಫ್ಘಾನಿಸ್ತಾನ ಆಂತರಿಕ ಸಚಿವಾಲಯ ತಿಳಿಸಿದೆ.
ಇಲ್ಲಿನ ಸಾರೋಬಿ ಜಿಲ್ಲೆಯ ಕನ್ಸ್‌ಸ್ಟ್ರಕ್ಷನ್ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗಾರ್ಡ್ಸ್‌ಗಳ ಮೇಲೆ ಗನ್‌ಮ್ಯಾನ್ ದಾಳಿ ನಡೆಸಿದ್ದ. ಈ ಸಂದರ್ಭದಲ್ಲಿ ಗುಂಡಿನ ಚಕಮಕಿಯೂ ನಡೆದಿತ್ತು. ಆಗ ಓರ್ವ ಗಾರ್ಡ್ ಗಾಯಗೊಂಡಿದ್ದು, ಒಂಬತ್ತು ಮಂದಿಯನ್ನು ಅಪಹರಿಸಿರುವ ಘಟನೆ ನಡೆದಿದೆ.
ಆದರೆ ಅಪಹರಿಸಲ್ಪಟ್ಟ ಗಾರ್ಡ್ಸ್‌ಗಳು ಯಾವ ದೇಶದ ಪ್ರಜೆಗಳು ಎಂಬ ಬಗ್ಗೆ ನಿಖರವಾಗಿ ತಿಳಿದುಬಂದಿಲ್ಲ. ಅವರ ಬಗ್ಗೆ ವಿವರಗಳು ಕೂಡ ಲಭ್ಯವಾಗಿಲ್ಲ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ.