ಅಮೆರಿಕ ಸರಕಾರದ ರಹಸ್ಯ ದಾಖಲೆಗಳನ್ನು ಕಾನೂನು ಬಾಹಿರವಾಗಿ ಬಹಿರಂಗಗೊಳಿಸಿರುವ ವಿಕಿಲೀಕ್ಸ್ ಸ್ಥಾಪಕ ಜುಲಿಯನ್ ಅಸ್ಸಾಂಜೆ ವಿರುದ್ಧ ಗೂಢಚರ್ಯೆ ಕಾಯ್ದೆಯಡಿ ಮೊಕದ್ದಮೆ ದಾಖಲಿಸುವ ಸಾಧ್ಯತೆ ಇರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ವಿಕಿಲೀಕ್ಸ್ ಸ್ಥಾಪಕ, ವಿಸ್ಟೆಲೆ ಬ್ಲೋವರ್ ವೆಬ್‌ಸೈಟ್‌ನ ಎಡಿಟರ್ ಇನ್ ಚೀಫ್ ಕೂಡ ಆಗಿರುವ ಅಸ್ಸಾಂಜೆ ಎಲ್ಲಿ ಅಡಗಿರಬಹುದು ಎಂಬ ಬಗ್ಗೆ ಅಮೆರಿಕದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ದಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಏತನ್ಮಧ್ಯೆ ವಿಕಿಲೀಕ್ಸ್ ಈಗಾಗಲೇ ಇರಾನ್, ಅಮೆರಿಕ, ಉತ್ತರ ಕೊರಿಯಾ, ಭಾರತ ಸೇರಿದಂತೆ ಹಲವು ದೇಶಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾನೆ. ಈ ಎಲ್ಲಾ ಮಹತ್ವದ ದಾಖಲೆಗಳು ಯಾರ ಮೂಲಕ ವಿಕಿಲೀಕ್ಸ್ ಕೈಸೇರಿದೆ, ಯಾವ ರೀತಿ ದಾಖಲೆ ಪಡೆದಿದ್ದಾರೆ ಎಂಬ ಬಗ್ಗೆ ಎಫ್‌ಬಿಐ ತನಿಖೆ ನಡೆಸುತ್ತಿದೆ.
ಆ ನಿಟ್ಟಿನಲ್ಲಿ ವಿಕಿಲೀಕ್ಸ್ ಬಿಡುಗಡೆ ಮಾಡಿರುವ ದಾಖಲೆ ಅಮೆರಿಕಕ್ಕೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಿಸಿದೆ. ಹಾಗಾಗಿ ವಿಕಿಲೀಕ್ಸ್ ಮತ್ತು ಅಸ್ಸಾಂಜೆ ವಿರುದ್ಧ ಬೇಹುಗಾರಿಕೆ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲು ಅಮೆರಿಕ ಸಿದ್ದತೆ ನಡೆಸಿರುವುದಾಗಿ ವರದಿ ವಿವರಿಸಿದೆ.