ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮುಂಬೈ ದಾಳಿ; ಸ್ಪೈನ್‌ನಲ್ಲಿ ಪಾಕ್ ಪ್ರಜೆ ಸೇರಿ 8 ಉಗ್ರರ ಸೆರೆ (Mumbai attacks | Spain arrests | Barcelona | Lashkar-e-Taiba,)
Bookmark and Share Feedback Print
 
ಮಹತ್ವದ ಬೆಳವಣಿಗೆಯೊಂದರಲ್ಲಿ ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೈನ್‌ನ ಬಾರ್ಸಿಲೋನಾದಲ್ಲಿ ಶಂಕಿತ ಎಂಟು ಮಂದಿ ಭಯೋತ್ಪಾದಕರನ್ನು ಸೆರೆಹಿಡಿಯಲಾಗಿದ್ದು, ಬಂಧಿತರದಲ್ಲಿ ಏಳು ಮಂದಿ ಪಾಕಿಸ್ತಾನಿಯರು ಹಾಗೂ ಓರ್ವ ಉತ್ತರ ಆಫ್ರಿಕಾದ ವ್ಯಕ್ತಿ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ.

ಏಳು ಮಂದಿ ಪಾಕಿಸ್ತಾನಿಯರನ್ನು ಮಂಗಳವಾರ ಬಂಧಿಸಲಾಗಿದ್ದು, ಓರ್ವ ಉತ್ತರ ಆಫ್ರಿಕಾದ ವ್ಯಕ್ತಿಯನ್ನು ಬುಧವಾರ ಬೆಳಿಗ್ಗೆ ಪೊಲೀಸರು ವಶಕ್ಕೆ ತೆಗೆದುಕೊಂಡಿರುವುದಾಗಿ ವರದಿ ಹೇಳಿದೆ. ಬಂಧಿತ ಎಂಟು ಮಂದಿ ನಕಲಿ ಗುರುತು ಪತ್ರ ಹೊಂದಿದ್ದಾರೆಂದು ವರದಿ ವಿವರಿಸಿದೆ.

ಅಲ್ಲದೇ ಶಂಕಿತ ಆರೋಪಿಗಳು ಲಷ್ಕರ್ ಇ ತೊಯ್ಬಾ ಸಂಘಟನೆಗೆ ಹಣಕಾಸು ಮತ್ತು ನಕಲಿ ದಾಖಲೆಗಳನ್ನು ರವಾನಿಸಿರುವುದಾಗಿ ದೂರಲಾಗಿದೆ. ಆ ಹಣ ಮತ್ತು ನಕಲಿ ದಾಖಲೆಗಳನ್ನು 2008 ನವೆಂಬರ್ ತಿಂಗಳಿನಲ್ಲಿ ಮುಂಬೈ ಮೇಲೆ ನಡೆದ ದಾಳಿಗೆ ಉಪಯೋಗಿಸಲಾಗಿದೆ ಎಂದು ತಿಳಿಸಿದೆ.

ಆದರೆ ಶಂಕಿತ ಭಯೋತ್ಪಾದಕರ ಬಂಧನದ ಕುರಿತು ಖಚಿತಪಡಿಸಲು ಆಂತರಿಕ ಸಚಿವಾಲಯದ ಯಾವುದೇ ಅಧಿಕಾರಿಗಳು ತಕ್ಷಣಕ್ಕೆ ಲಭ್ಯವಾಗಿಲ್ಲ ಎಂದು ವರದಿ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ