ರಷ್ಯಾ ವಾಸ್ತವವಾಗಿ 'ಮಾಫಿಯಾ ದೇಶ' ದೇಶವಾಗಿದ್ದು, ಇಲ್ಲಿನ ರಾಜಕೀಯ ಪಕ್ಷಗಳೇ ಈ ಸಂಘಟಿತ ಅಪರಾಧಕ್ಕೆ ಕೈಜೋಡಿಸಿರುವುದಾಗಿ ಅಮೆರಿಕದ ಮೆಮೋ ದಾಖಲೆಯನ್ನು ವಿಕಿಲೀಕ್ಸ್ ಬಹಿರಂಗಪಡಿಸಿರುವುದನ್ನು ದಿ ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ.
ಸ್ಪೈನ್ ಪ್ರಾಸಿಕ್ಯೂಟರ್ ಜೋಸೆ ಗೋನ್‌ಜಾಲಿಸ್ ಅಮೆರಿಕದ ಅಧಿಕಾರಿಗಳಿಗೆ ಈ ಬಗ್ಗೆ ತಿಳಿಸುತ್ತ, ರಷ್ಯಾ ಮಾಫಿಯಾ ದೇಶವಾಗಿ ಪರಿವರ್ತನೆಯಾಗುತ್ತಿದೆ. ಹಾಗಾಗಿ ರಷ್ಯಾ ಸರಕಾರ ಮತ್ತು ಸಂಘಟಿತ ಅಪರಾಧ ಸಂಘಟನೆ ನಡುವೆ ಯಾವುದೇ ವ್ಯತ್ಯಾಸ ಇಲ್ಲ ಎಂಬುದಾಗಿ ತಿಳಿಸಿದ್ದರು.
ಸುಮಾರು ಒಂದು ದಶಕಗಳ ಕಾಲ ಸ್ಪೈನ್‌ನಲ್ಲಿ ರಷ್ಯಾದ ಸಂಘಟಿತ ಅಪರಾಧದ ಬಗ್ಗೆ ಗೋನ್‌ಜಾಲಿಸ್ ತನಿಖೆ ನಡೆಸಿದ್ದರು. ಅಷ್ಟೇ ಅಲ್ಲ ರಷ್ಯಾದ ರಾಜಕೀಯ ಪಕ್ಷಗಳೇ ಸಂಘಟಿತ ಕ್ರೈಮ್‌ಗೆ ಕೈಜೋಡಿಸಿರುವುದಾಗಿ ಅವರು ಆರೋಪಿಸಿದ್ದಾರೆ.
ರಷ್ಯಾದ ಲಿಬರಲ್ ಡೆಮೋಕ್ರಟಿಕ್ ಪಕ್ಷವೇ (ಎಲ್‌ಡಿಪಿ) ಕೆಜಿಬಿ(ಗುಪ್ತದಳ)ಯನ್ನ ಹುಟ್ಟುಹಾಕಿತ್ತು. ಅದು ಸ್ವದೇಶದಲ್ಲೇ ಸಾಕಷ್ಟು ಅಪರಾಧ ಎಸಗಿತ್ತು ಎಂದು ದೂರಿದ್ದಾರೆ.