ರಷ್ಯಾದ ವಿದೇಶಾಂಗ ಸಚಿವ ಸೆರ್ಗಾಯೈ ಲಾವ್‌ರೋವ್ ದೊಡ್ಡ ಸುಳ್ಳುಗಾರ ಎಂದು ಫ್ರಾನ್ಸ್ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಕರೆದಿರುವುದಾಗಿ ಅಮೆರಿಕ ಬಿಡುಗಡೆ ಮಾಡಿರುವ ಮೆಮೊ ಉಲ್ಲೇಖಿಸಿ ವಿಕಿಲೀಕ್ಸ್ ಬಹಿರಂಗಪಡಿಸಿದೆ.
ಜಾರ್ಜಿಯಾ ಜತೆಗಿನ ವಿವಾದಕ್ಕೆ ಸಂಬಂಧಿಸಿದಂತೆ 2008ರ ಅಗೋಸ್ಟ್ ತಿಂಗಳಿನಲ್ಲಿ ರಷ್ಯಾ ಜತೆ ಮಾತುಕತೆ ನಡೆಸುವ ವೇಳೆ ಸರ್ಕೋಜಿ ಈ ರೀತಿಯಾಗಿ ಕರೆದಿರುವುದಾಗಿ ತಿಳಿಸಿದೆ.
ಮಾತುಕತೆ ಮೂಲಕ ಸಮರವನ್ನು ನಿಲ್ಲಿಸುವ ಬಗ್ಗೆ ಸರ್ಕೋಜಿ ಸಂಧಾನ ಮಾತುಕತೆ ನಡೆಸುವ ವೇಳೆ ರಷ್ಯಾ ವಿದೇಶಾಂಗ ಸಚಿವ ಸೆರ್ಗಾಯೈ ಅವರನ್ನು ಸುಳ್ಳುಗಾರ ಎಂದು ಕರೆದಿರುವುದಾಗಿ ಅಮೆರಿಕದ ರಾಯಭಾರಿ ಮೆಮೋದಲ್ಲಿ ಉಲ್ಲೇಖಿಸಿರುವ ಮಾಹಿತಿಯನ್ನು ವಿಕಿಲೀಕ್ಸ್ ವಿಶಲ್ ಬ್ಲೋವೆರ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ ಎಂದು ಫ್ರಾನ್ಸ್ ದೈನಿಕ ಲೆ ಮೋಂಡೆ ವಿವರಿಸಿದೆ.
ನಮ್ಮ ಹಕ್ಕನ್ನು ಒಂದು ವೇಳೆ ರಷ್ಯಾ ಗೌರವಿಸದೆ, ತಿರಸ್ಕರಿಸಿದ್ದೇ ಆದಲ್ಲಿ ರಷ್ಯಾ ಈ ಬಗ್ಗೆ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಫ್ರಾನ್ಸ್ ಎಚ್ಚರಿಸಿರುವುದಾಗಿಯೂ ದಾಖಲೆ ತಿಳಿಸಿದೆ.