ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕ: ಪಾಕಿಸ್ತಾನದ 3 ಉಗ್ರರ ಮೇಲೆ ನಿರ್ಬಂಧ (US | Jaish-e-Mohammed | sanctions | Pak-based terrorists)
Bookmark and Share Feedback Print
 
ಪಾಕಿಸ್ತಾನ್ ಮೂಲದ ಜೈಷ್ ಇ ಮೊಹಮ್ಮದ್ ಸಂಘಟನೆಯ ಕಮಾಂಡರ್ ಅಬ್ದುಲ್ ರೌಫ್ ಅಜ್‌ಹಾರ್ ಸೇರಿದಂತೆ ಮೂರು ಉಗ್ರರ ಮೇಲೆ ಅಮೆರಿಕ ಗುರುವಾರ ನಿರ್ಬಂಧ ಹೇರಿದೆ.

ಜೆಇಎಂನ ಭಾರತದ ಕಮಾಂಡರ್ ಆಗಿರುವ ಅಬ್ದುಲ್, ಲಷ್ಕರ್ ಇ ಜಾಂಘ್ವಿ(ಎಲ್‌ಇಜೆ)ನ ಹಿರಿಯ ಮುಖಂಡ ಅಮಾನುಲ್ಲಾ ಅಫ್ರಿದಿ ಹಾಗೂ ಮತ್ತೊಬ್ಬ ಕಮಾಂಡರ್ ಮಾಟಿ ಉರ್ ರೆಹಮಾನ್ ವಿರುದ್ಧ ಅಮೆರಿಕದ ಟ್ರೆಶರಿ ಇಲಾಖೆ ನಿರ್ಬಂಧ ವಿಧಿಸಿರುವುದಾಗಿ ವರದಿಯೊಂದು ತಿಳಿಸಿದೆ.

ಎರಡು ಭಯೋತ್ಪಾದಕ ಸಂಘಟನೆಗಳು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಭಾರತದಲ್ಲಿ ದಾಳಿ ನಡೆಸಿ ಅಮಾಯಕ ನಾಗರಿಕರನ್ನು ಹತ್ಯೆಗೈದಿರುವುದಕ್ಕೆ ಹೊಣೆಯಾಗಿವೆ ಎಂದು ಭಯೋತ್ಪಾದನಾ ಮತ್ತು ಫೈನಾಶಿಯಲ್ ಇಂಟೆಲಿಜೆನ್ಸ್‌ನ ಕಾರ್ಯದರ್ಶಿ ಸ್ಟುವರ್ಟ್ ಲೆವೈ ವಿವರಿಸಿದ್ದಾರೆ.

ನಿಷೇಧ ಹೇರಲ್ಪಟ್ಟ ಮೂರು ಉಗ್ರರು ಈ ಭಯೋತ್ಪಾದಕ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಕಾರ್ಯಾಚರಿಸುತ್ತಿದ್ದರು. ಆ ನಿಟ್ಟಿನಲ್ಲಿ ಮೂವರು ಉಗ್ರರ ಮೇಲೆ ನಿರ್ಬಂಧ ಹೇರಿರುವುದಾಗಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ