ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಿಜ್ಞಾನಿ ಎ.ಕ್ಯೂ.ಖಾನ್ ಸಂಚಾರಕ್ಕೆ ಪಾಕಿಸ್ತಾನ ಅನುಮತಿ (A Q Khan | nuclear scientist | Pakistan | private university)
Bookmark and Share Feedback Print
 
ಗೃಹಬಂಧನದಿಂದ ಮುಕ್ತವಾಗಿರುವ ಪಾಕಿಸ್ತಾನದ ಕಳಂಕಿತ ಪರಮಾಣು ವಿಜ್ಞಾನಿ ಎ.ಕ್ಯೂ.ಖಾನ್ ಅವರು ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ಅಧಿಕಾರಿಗಳು ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಎ.ಕ್ಯೂ.ಖಾನ್ ಅವರು ಗುರುವಾರ ಖಾಸಗಿ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಹಾಜರಾಗಿದ್ದು, ಅವರು ಶಿಕ್ಷಣ ಸಚಿವ ಅಸೆಫ್ ಅಹ್ಮದ್ ಅಲಿ ಅವರ ಸಮೀಪದಲ್ಲಿ ವೇದಿಕೆ ಹಂಚಿಕೊಂಡಿದ್ದರು.

ಇತ್ತೀಚೆಗಷ್ಟೇ ಪರಮಾಣು ವಿಜ್ಞಾನಿ ಖಾನ್ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಲಾಹೋರ್ ಹೈಕೋರ್ಟ್ ರದ್ದುಗೊಳಿಸಿತ್ತು. ಆದರೆ ಪಾಕ್ ಸರಕಾರ ಅವರ ಸಾರ್ವಜನಿಕ ಭೇಟಿಗೆ ನಿಷೇಧ ಹೇರಿತ್ತು. ಇದನ್ನು ಪ್ರಶ್ನಿಸಿ ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದ ಖಾನ್ ಅವರಿಗೆ, ಖಾನ್ ಭೇಟಿಗೆ ಯಾವುದೇ ಅಡ್ಡಿಪಡಿಸದಂತೆ ಕೋರ್ಟ್ ಸೂಚನೆ ನೀಡಿತ್ತು.

ಆ ನಿಟ್ಟಿನಲ್ಲಿ ಖಾನ್ ಕೆಲವು ವಾರಗಳ ಹಿಂದೆ ಕೋಶಾರ್ ಮಾರ್ಕೆಟ್‌ನಲ್ಲಿ ಶಾಪಿಂಗ್ ಕೂಡ ಮಾಡಿದ್ದರು. ಆದರೆ ಇಸ್ಲಾಮಾಬಾದ್ ಹೃದಯಭಾಗದಲ್ಲಿರುವ ಅವರ ಮನೆಯ ಸುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಅವರ ಚಲನವಲನದ ಮೇಲೆ ತೀವ್ರ ನಿಗಾ ಇರಿಸಲಾಗಿದೆ ಎಂದು ಪಾಕ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ