ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್: ಕ್ರಿಶ್ಚಿಯನ್ ಮಹಿಳೆಯನ್ನ ಕೊಂದ್ರೆ 5 ಲಕ್ಷ ಇನಾಮು! (Christian woman | Muslim cleric | Pakistan | blasphemy | death sentence)
Bookmark and Share Feedback Print
 
ಧರ್ಮನಿಂದನೆ ಆರೋಪದಡಿಯಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಕ್ರಿಶ್ಚಿಯನ್ ಮಹಿಳೆ ಆಸಿಯಾ ಬೀಬಿಯನ್ನು ಕೊಂದವರಿಗೆ ಐದು ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ಪಾಕಿಸ್ತಾನದ ಖೈಬೆರ್ ಪಾಕ್ತುನ್‌ಖಾವಾ ಪ್ರಾಂತ್ಯದ ಮಸೀದಿಯೊಂದರ ಮೌಲ್ವಿ ಆಫರ್ ನೀಡಿದ್ದಾರೆ.!

ಇಲ್ಲಿನ ಪ್ರತಿಷ್ಠಿತ ಮೊಹಬತ್ ಖಾನ್ ಮಸೀದಿಯ ಇಮಾಮ್ ಮೌಲಾನಾ ಯೂಸೂಫ್ ಖುರೇಷಿ ಶುಕ್ರವಾರ ಪ್ರಾರ್ಥನೆಯ ಸಂದರ್ಭದಲ್ಲಿ ಧರ್ಮೋಪದೇಶ ನೀಡುವ ಸಮಯದಲ್ಲಿ ಆಸಿಯಾ ಬೀಬಿಯನ್ನು ಕೊಂದವರಿಗೆ ಐದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

ಧರ್ಮನಿಂದನೆ ಮಾಡಿದ ಅಸಿಯಾ ಬೀಬಿಯನ್ನು ಯಾರು ಹತ್ಯೆಗೈಯುತ್ತಾರೋ ಅವರಿಗೆ ಮಸೀದಿಯ ಫಂಡ್‌ನಿಂದ ಐದು ಲಕ್ಷ ರೂಪಾಯಿ ಪಾವತಿಸುವುದಾಗಿ ಮೌಲ್ವಿ ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ. ಈ ಹಿಂದೆಯೂ ಮೌಲ್ವಿ ಖುರೇಷಿ ಹಲವಾರು ವಿವಾದಿತ ಫತ್ವಾ ಹೊರಡಿಸಿದ್ದ.

ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರನ್ನು ನಿಂದಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಪ್ರಾಂತ್ಯದ ಕೆಳ ನ್ಯಾಯಾಲಯ 45ರ ಹರೆಯದ ಐದು ಮಕ್ಕಳ ತಾಯಿಯಾಗಿರುವ ಆಸಿಯಾ ಬೀಬಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಈ ಬಗ್ಗೆ ಪಾಕಿಸ್ತಾನದಾದ್ಯಂತ ವಿವಾದಿತ ಧರ್ಮನಿಂದನಾ ಕಾಯ್ದೆಗೆ ತಿದ್ದುಪಡಿ ತರಬೇಕೆಂದು ಬಿಸಿ,ಬಿಸಿ ಚರ್ಚೆ ನಡೆಯುತ್ತಿದೆ.

ಧರ್ಮನಿಂದನೆ ಆರೋಪದಡಿಯಲ್ಲಿ ಕೆಳ ನ್ಯಾಯಾಲಯ ವಿಧಿಸಿರುವ ಗಲ್ಲುಶಿಕ್ಷೆಯನ್ನು ಪ್ರಶ್ನಿಸಿ ಆಸಿಯಾ ಪತಿ ಲಾಹೋರ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಏತನ್ಮಧ್ಯೆ, ಧರ್ಮನಿಂದನೆ ಮಾಡಿದ್ದ ಆಸಿಯಾ ಬೀಬಿಗೆ ಒಂದು ವೇಳೆ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಕ್ಷಮಾದಾನ ನೀಡಿದರೆ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಧಾರ್ಮಿಕ ಪಕ್ಷಗಳು ಹಾಗೂ ಮೌಲ್ವಿಗಳು ಎಚ್ಚರಿಕೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ