ಭೂಕುಸಿತಕ್ಕೆ ಸುಮಾರು 200 ಮಂದಿ ಸಮಾಧಿಯಾಗಿರುವ ಘಟನೆ ಕೊಲಂಬಿಯಾದ ಎರಡನೇ ದೊಡ್ಡ ನಗರವಾದ ಮೆಡೆಲ್ಲಿನ್‌ನಲ್ಲಿ ಸಂಭವಿಸಿರುವುದಾಗಿ ರೆಡ್ ಕ್ರಾಸ್ ರಿಲೀಫ್ ಕಾರ್ಯಕರ್ತರು ತಿಳಿಸಿದ್ದಾರೆ.
ಭೂ ಕುಸಿತದಲ್ಲಿ ಸುಮಾರು ಹತ್ತು ಮನೆಗಳನ್ನು ಧ್ವಂಸಗೊಂಡಿದೆ. ಆರಂಭಿಕ ಹಂತದಲ್ಲಿ 150-200 ಮಂದಿ ನಾಪತ್ತೆಯಾಗಿದ್ದಾರೆ. ಏತನ್ಮಧ್ಯೆ ಮೂರು ಮಂದಿಯನ್ನು ರಕ್ಷಿಸಲಾಗಿದೆ ಎಂದು ರೆಡ್ ಕ್ರಾಸ್ ಕಾರ್ಯಾಚರಣೆಯ ಸಹಾಯಕ ನಿರ್ದೇಶಕ ಸಿಸರ್ ಉರೇನಾ ವಿವರಿಸಿದ್ದಾರೆ.
ಆದರೂ ಭೂ ಕುಸಿತದಲ್ಲಿ ಸಿಲುಕಿದವರ ರಕ್ಷಣೆಗೆ ಕಾರ್ಯಾಚರಣೆ ಮುಂದುವರಿಸಿರುವುದಾಗಿ ರೆಡ್ ಕ್ರಾಸ್ ಅಧಿಕಾರಿಗಳು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.