ಅಲ್ ಖಾಯಿದಾ, ತಾಲಿಬಾನ್ ಸೇರಿದಂತೆ ಪ್ರಮುಖ ಇಸ್ಲಾಮಿಕ್ ಉಗ್ರಗಾಮಿ ಸಂಘಟನೆಗಳಿಗೆ ಹಣಕಾಸಿನ ನೆರವು ನೀಡುವಲ್ಲಿ ಸೌದಿ ಅರೇಬಿಯಾ ಮತ್ತು ತೈಲ ಉತ್ಪಾದನೆಯ ಶ್ರೀಮಂತ ಗಲ್ಫ್ ರಾಷ್ಟ್ರಗಳು ಪ್ರಮುಖ ಪಾತ್ರವಹಿಸುತ್ತಿರುವುದಾಗಿ ವಿಕಿಲೀಕ್ಸ್ ಹೊರಹಾಕಿರುವ ಮಾಹಿತಿಯಿಂದ ಬಯಲಾಗಿದೆ.
ಅಲ್ಲದೇ ಸೌದಿ ಅರೇಬಿಯಾದ ಖಾಸಗಿ ದಾನಿಗಳು ಕೂಡ ಜಾಗತಿಕವಾಗಿಯೂ ಸುನ್ನಿ ಭಯೋತ್ಪಾದಕ ಸಂಘಟನೆಗಳಿಗೂ ಭಾರೀ ಪ್ರಮಾಣದ ಆರ್ಥಿಕ ನೆರವು ನೀಡುತ್ತಿರುವ ಬಗ್ಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರ ಮೆಮೋ ಅನ್ನು ವರದಿ ಮಾಹಿತಿಯನ್ನು ವಿಕಿಲೀಕ್ಸ್ ಹೊರಹಾಕಿದೆ.
ಸೌದಿ ಅರೇಬಿಯಾ ಕೂಡ ಭಯೋತ್ಪಾದನಾ ಸಂಘಟನೆಗಳ ಜತೆ ನಿಕಟ ಸಂಪರ್ಕ ಹೊಂದಿದ್ದು, ಹಣಕಾಸಿನ ನೆರವು ನೀಡುತ್ತಿರುವ ಬಗ್ಗೆ ದಾಖಲೆ ವಿವರಿಸಿದೆ. ಅಷ್ಟೇ ಅಲ್ಲ ಉಗ್ರ ಸಂಘಟನೆಗಳ ರಕ್ಷಣೆಗೂ ಕೂಡ ಸೌದಿ ಅರೇಬಿಯಾ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿರುವುದಾಗಿಯೂ ವರದಿ ತಿಳಿಸಿದೆ.