ಬಂಧಿತ ಕೈದಿಗಳನ್ನು ಬಿಡುಗಡೆ ಮಾಡಿ; ಮ್ಯಾನ್ಮಾರ್‌ಗೆ ವಿಶ್ವಸಂಸ್ಥೆ
ಯೂನೈಟೆಡ್ ನೇಷನ್ಸ್, ಮಂಗಳವಾರ, 7 ಡಿಸೆಂಬರ್ 2010( 14:56 IST )
ಪ್ರಜಾಪ್ರಭುತ್ವ ಪರ ಹೋರಾಟಗಾರ್ತಿ ಆಂಗ್ ಸಾನ್ ಸೂಕಿ ಅವರನ್ನು ಬಂಧಮುಕ್ತಗೊಳಿಸಿದ ಬೆನ್ನಲ್ಲೇ ಬಂಧಿತ ಎಲ್ಲಾ ರಾಜಕೀಯ ಕೈದಿಗಳನ್ನು ಮ್ಯಾನ್ಮಾರ್ ಜುಂಟಾ ಸರಕಾರ ಬಿಡುಗಡೆ ಮಾಡಬೇಕೆಂದು ವಿಶ್ವಸಂಸ್ಥೆ ಕರೆ ನೀಡಿದೆ.
ಮ್ಯಾನ್ಮಾರ್‌ನ ಆಡಳಿತಾರೂಢ ಸರಕಾರ ಕೂಡಲೇ ಬಂಧಿತ ರಾಜಕೀಯ ಕೈದಿಗಳನ್ನು ಬಂಧಮುಕ್ತಗೊಳಿಸಬೇಕೆಂದು ವಿಶ್ವಸಂಸ್ಥೆ ಒತ್ತಡ ಹೇರಿದೆ. ಅಲ್ಲದೇ ಮುಂದಿನ ಚುನಾವಣೆ ಕುರಿತಂತೆ ವಿರೋಧ ಪಕ್ಷದ ವರಿಷ್ಠೆ ಆಂಗ್ ಸಾನ್ ಸೂಕಿ ಅವರ ಜೊತೆ ಮ್ಯಾನ್ಮಾರ್ ಆಡಳಿತರೂಢ ಜುಂಟಾ ಸರಕಾರ ಮಾತುಕತೆ ನಡೆಸಬೇಕು ಎಂದು ವಿಶ್ವಸಂಸ್ಥೆ ವಕ್ತಾರ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮ್ಯಾನ್ಮಾರ್ ಸಾಕಷ್ಟು ಅಭಿವೃದ್ಧಿ ಹೊಂದಬೇಕಾಗಿದೆ. ಹಾಗಾಗಿ ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ನೆಲೆಗೊಳ್ಳಬೇಕು. ಅದಕ್ಕೆ ಪ್ರಜಾಪ್ರಭುತ್ವ ಪರ ಚಿಂತನೆಯ ಎಲ್ಲರೂ ಕೈಜೋಡಿಸಬೇಕು ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.