ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ದುಬೈ: ವಿಮಾನದಲ್ಲಿ ಹಾವು ಸಾಗಿಸಿ ಸಿಕ್ಕಿಬಿದ್ದ ಭೂಪ! (Dubai | python | Saudi passenger | snakes | Jakarta)
Bookmark and Share Feedback Print
 
ಹೆಬ್ಬಾವು ಸೇರಿದಂತೆ ನಾಲ್ಕು ಹಾವುಗಳನ್ನು ಕೈಚೀಲದಲ್ಲಿ ಇಟ್ಟುಕೊಂಡು ವಿಮಾನದಲ್ಲಿ ಸಾಗಿಸುತ್ತಿದ್ದ ಸೌದಿ ಅರೇಬಿಯಾದ ಪ್ರಯಾಣಿಕನೊಬ್ಬ ಸಿಕ್ಕಿಬಿದ್ದ ಘಟನೆ ನಡೆದಿದೆ.

ಇತಿಹಾದ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಈ ವ್ಯಕ್ತಿಯನ್ನು ಅಬುಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಎರಡು ಗಿಳಿ, ಅಳಿಲು, ಹೆಬ್ಬಾವು ಸೇರಿದಂತೆ ನಾಲ್ಕು ಹಾವುಗಳನ್ನು ಕೈಚೀಲದಲ್ಲಿ ಇಟ್ಟುಕೊಂಡಿದ್ದ ಎಂದು ದಿ ನ್ಯಾಷನಲ್ ಪತ್ರಿಕೆ ವರದಿ ಮಾಡಿದೆ.

ಪಕ್ಷಿಗಳಾಗಲಿ ಅಥವಾ ಸರೀಸೃಪಗಳನ್ನು ವಿಮಾನದಲ್ಲಿ ಸಾಗಿಸಲು ಅನುಮತಿ ಇಲ್ಲ. ಈ ರೀತಿಯ ಸಾಗಾಟವನ್ನು ನಿಷೇಧಿಸಲಾಗಿದೆ. ಇದರಿಂದ ಉಳಿದ ಪ್ರಯಾಣಿಕರಿಗೆ ಅಪಾಯ ಎಂದು ಭದ್ರತಾ ಅಧಿಕಾರಿ ಖಾಮಿಸ್ ಅಲ್ ಮಾರಾರ್ ಪತ್ರಿಕೆಗೆ ತಿಳಿಸಿದ್ದಾರೆ.

ಆದರೆ ಜಕಾರ್ತಾ ವಿಮಾನ ನಿಲ್ದಾಣದಲ್ಲಿ ಈ ಪ್ರಯಾಣಿಕನಿಗೆ ಭದ್ರತಾ ಅಧಿಕಾರಿಗಳು ಯಾವ ರೀತಿ ಕ್ಲಿಯರೆನ್ಸ್ ನೀಡಿದರು ಎಂಬುದು ತಿಳಿಯಲಿಲ್ಲ ಎಂದು ವಿವರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ