ನೊಬೆಲ್ ಸಮಾರಂಭ: ಚೀನಾ ಗೈರು
ಲಾಸ್‌ಏಂಜಲೀಸ್: ಚೀನಾದ ಬಂಡುಕೋರ ಲಿಯೂ ಕ್ಸಿಯಾಬಾವೋ ಅವರಿಗೆ ಡಿ.10ರಂದು ನಾರ್ವೆಯ ಓಸ್ಲೋದಲ್ಲಿ ನಡೆಯಲಿರುವ ನೊಬೆಲ್ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಚೀನಾ ಸೇರಿದಂತೆ 19 ದೇಶಗಳು ಭಾಗವಹಿಸುವುದಿಲ್ಲ ಎಂದು ನೊಬೆಲ್ ಪ್ರಶಸ್ತಿ ಸಮಿತಿ ತಿಳಿಸಿದೆ. ಆದರೆ ಈ ಸಮಾರಂಭದಲ್ಲಿ ಭಾರತ ಸೇರಿದಂತೆ 44 ದೇಶಗಳು ಪಾಲ್ಗೊಳ್ಳುತ್ತಿರುವುದಾಗಿ ಹೇಳಿದೆ.