ಪ್ರಯಾಣಿಕರಿಂದ ತುಂಬಿದ್ದ ಬಸ್ ನಿಲ್ದಾಣವನ್ನು ಗುರಿಯಾಗಿರಿಸಿ ಆತ್ಮಹತ್ಯಾ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡ ಪರಿಣಾಮ ಸುಮಾರು 15 ಮಂದಿ ಸಾವನ್ನಪ್ಪಿ, 20 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಪಾಕಿಸ್ತಾನ ವಾಯುವ್ಯ ಪ್ರದೇಶದ ಕೋಹಾಟ್ ಎಂಬಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆತ್ಮಹತ್ಯಾ ಬಾಂಬರ್ ಜನನಿಭಿಡ ಮಾರ್ಕೆಟ್ ಪ್ರದೇಶ ಸಮೀಪದ ಬಸ್ ನಿಲ್ದಾಣದಲ್ಲಿ ತನ್ನನ್ನು ತಾನು ಸ್ಫೋಟಿಸಿಕೊಂಡ ಪರಿಣಾಮ ಈ ಘಟನೆ ನಡೆದಿದೆ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ. ಪೇಶಾವರದಿಂದ 60 ಕಿ.ಮೀ. ದೂರದಲ್ಲಿರುವ ಖೇಬೆರ್ ಪಾಕ್ತುಖಾವಾದ ಕೋಹಾಟ್ನಲ್ಲಿ ಈ ಘಟನೆ ನಡೆದಿದೆ.
ಈ ದುಷ್ಕೃತ್ಯದಲ್ಲಿ ಹಲವಾರು ಜನರು ಗಾಯಗೊಂಡಿರುವುದಾಗಿ ನಗರ ಪೊಲೀಸ್ ಆಯುಕ್ತ ಡಿಲ್ವಾರ್ ಖಾನ್ ಬಾಂಗಾಶ್ ಟಿವಿ ಚಾನೆಲ್ವೊಂದಕ್ಕೆ ತಿಳಿಸಿದ್ದು, ಸಾವನ್ನಪ್ಪಿದವರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಯಾರನ್ನು ಗುರಿಯಾಗಿರಿಸಿ ಈ ಸ್ಫೋಟ ನಡೆಸಲಾಗಿದೆ ಎಂಬ ಅಂಶ ತಿಳಿದು ಬಂದಿಲ್ಲ. ಈ ಮಾರ್ಕೆಟ್ ಪ್ರದೇಶ ಬಸ್ ನಿಲ್ದಾಣದ ಸಮೀಪದ ಇದ್ದು ಸದಾ ಜನಜಂಗುಳಿಯಿಂದ ಕೂಡಿರುವುದಾಗಿ ಅವರು ವಿವರಿಸಿದ್ದಾರೆ.