ಆತ್ಮಹತ್ಯಾ ದಾಳಿ ನಿಲ್ಲಿಸಿ; ತಾಲಿಬಾನ್ ಉಗ್ರರಿಗೆ ಪತ್ರಕರ್ತರು
ಇಸ್ಲಾಮಾಬಾದ್, ಬುಧವಾರ, 8 ಡಿಸೆಂಬರ್ 2010( 16:06 IST )
ತಾಲಿಬಾನ್ ಉಗ್ರರು ಸಾರ್ವಜನಿಕ ಸ್ಥಳಗಳಲ್ಲಿ ಆತ್ಮಹತ್ಯಾ ದಾಳಿ ನಡೆಸುವುದನ್ನು ನಿಲ್ಲಿಸಬೇಕೆಂದು ಪಾಕಿಸ್ತಾನದ ಪತ್ರಕರ್ತರು ಬಹಿರಂಗವಾಗಿ ಮನವಿ ಮಾಡಿಕೊಂಡಿದ್ದಾರೆ.
ಮೊಹ್ಮಂಡ್ ಬುಡಕಟ್ಟು ಪ್ರದೇಶದಲ್ಲಿನ ಸರಕಾರಿ ಆವರಣದೊಳಗೆ ಇಬ್ಬರು ತಾಲಿಬಾನ್ ಆತ್ಮಹತ್ಯಾ ಬಾಂಬರ್ ತಮ್ಮನ್ನು ತಾವು ಸ್ಫೋಟಿಸಿಕೊಂಡ ಪರಿಣಾಮ ಎಕ್ಸ್‌ಪ್ರೆಸ್ ನ್ಯೂಸ್‌ನ ಅಬ್ದುಲ್ ವಾಹಾಬ್, ವಾಖ್ತ್ ಟಿವಿಯ ಪರ್ವೆಜ್ ಖಾನ್ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿತ್ತು.
ಬುಡಕಟ್ಟು ಹಿರಿಯರು ಮತ್ತು ಸರಕಾರಿ ಅಧಿಕಾರಿಗಳ ಸಭೆಯ ವರದಿಯನ್ನು ಮಾಡಲು ತೆರಳಿದ್ದ ಪತ್ರಕರ್ತರು ಸೇರಿದಂತೆ ಐವತ್ತಕ್ಕೂ ಅಧಿಕ ಮಂದಿ ದಾಳಿಯಲ್ಲಿ ಸಾವನ್ನಪ್ಪಿದ್ದರು. ಈ ದಾಳಿಗೆ ತಾವೇ ಹೊಣೆ ಎಂದು ತಾಲಿಬಾನ್ ತಿಳಿಸಿತ್ತು.
ಆ ನಿಟ್ಟಿನಲ್ಲಿ ನಾವು ತಾಲಿಬಾನ್ ಉಗ್ರರಲ್ಲಿ ಮನವಿ ಮಾಡಿಕೊಳ್ಳುತ್ತೇವೆ. ಹಾಗಾಗಿ ಆತ್ಮಹತ್ಯಾ ಬಾಂಬ್ ದಾಳಿಯನ್ನು ಕೂಡಲೇ ನಿಲ್ಲಿಸಬೇಕೆಂದು ಪತ್ರಕರ್ತರು ಒತ್ತಾಯಿಸಿದ್ದಾರೆ.
ಆ ನಿಟ್ಟಿನಲ್ಲಿ ತಾಲಿಬಾನ್ ಉಗ್ರರು ಸಾರ್ವಜನಿಕ ಸ್ಥಳಗಳಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ನಡೆಸುವುದನ್ನು ಕೂಡಲೇ ಕೈಬಿಡಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ. ಆ ಮೂಲಕ ಅಮಾಯಕ ನಾಗರಿಕರ ಹತ್ಯೆಯನ್ನು ತಪ್ಪಿಸಬೇಕೆಂದು ಪತ್ರಕರ್ತರು ತಿಳಿಸಿದ್ದಾರೆ.