ಶ್ರೀಲಂಕಾದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ದೇಶದ ಇಲೆಕ್ಟ್ರಿಸಿಟಿ ಮಂಡಳಿಗೆ ಪ್ರತಿದಿನ ನೂರು ಮಿಲಿಯನ್ ಹಣ ಉಳಿತಾಯವಾದಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಧಾರಾಕಾರ ಮಳೆಯಿಂದಾಗಿ ದೇಶದ ಪ್ರಮುಖ ನದಿಗಳೆಲ್ಲ ತುಂಬಿ ಹೋಗಿದ್ದು, ಇದರಿಂದಾಗಿ ವಿದ್ಯುತ್ ಕೊರತೆ ಸಮಸ್ಯೆ ನಿವಾರಿಸಬಹುದಾಗಿದೆ ಎಂದು ಸಿಲೋನ್ ಇಲೆಕ್ಟ್ರಿಸಿಟಿ ಬೋರ್ಡ್ ಅಧ್ಯಕ್ಷ ವಿಂಧ್ಯಾ ಆಮ್ರಪಾಲಾ ಹೇಳಿದ್ದಾರೆ.
ಶೇ.40ರಷ್ಟು ಹೈಡ್ರೋ ಪವರ್‌ನಿಂದ ಲಂಕಾಕ್ಕೆ ವಿದ್ಯುತ್ ಪಡೆದುಕೊಳ್ಳಲಾಗುತ್ತಿದೆ. ಥರ್ಮಲ್ ಪವರ್‌ನಿಂದಲೂ ವಿದ್ಯುತ್ ಪಡೆಯಲಾಗುತ್ತಿದೆ. ಒಟ್ಟಾರೆ ಮಳೆಯಿಂದಾಗಿ ಇದೀಗ ವಿದ್ಯುತ್ ಕೊರತೆ ಬಗೆಹರಿಸಬಹುದಾಗಿದೆ. ಆ ನಿಟ್ಟಿನಲ್ಲಿ ಪ್ರತಿದಿನ ನೂರು ಮಿಲಿಯನ್ ಹಣ ಉಳಿತಾಯವಾದಂತಾಗಿದೆ ಎಂದು ವಿವರಿಸಿದ್ದಾರೆ.