ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಿಕಿಲೀಕ್ಸ್ ಅಸಾಂಜ್‌ಗೆ ನೊಬೆಲ್ ಪ್ರಶಸ್ತಿ ಕೊಡ್ಬೇಕು: ರಷ್ಯಾ (WikiLeaks | Julian Assange | Nobel candidate | Russia)
Bookmark and Share Feedback Print
 
ಬಂಧಿತ ವಿಕಿಲೀಕ್ಸ್ ಸ್ಥಾಪಕ ಜೂಲಿಯಾನ್ ಅಸಾಂಜ್ ಅವರಿಗೆ ನೆರವು ನೀಡುವ ಅಗತ್ಯವಿದೆ. ಅಲ್ಲದೇ ಅಸಾಂಜ್ ನೊಬೆಲ್ ಪ್ರಶಸ್ತಿ ಪಡೆಯುವ ಸಂಭವ ಇರುವುದಾಗಿ ಕ್ರೆಮ್ಲಿನ್ ಮೂಲಗಳು ತಿಳಿಸಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.

ಸಾಮಾಜಿಕ ಮತ್ತು ಸರಕಾರೇತರ ಸಂಘಟನೆಗಳು ಅಸಾಂಜ್ ಅವರಿಗೆ ಯಾವ ರೀತಿಯಲ್ಲಿ ನೆರವು ನೀಡಬಹುದು ಎಂಬುದರ ಬಗ್ಗೆ ಆಲೋಚಿಸಬೇಕು ಎಂಬುದಾಗಿ ಕ್ರೆಮ್ಲಿನ್ ಆಡಳಿತ ಸಲಹೆ ನೀಡಿರುವುದಾಗಿ ರಷ್ಯನ್ ನ್ಯೂಸ್ ಏಜೆನ್ಸಿ ವಿವರಿಸಿದೆ.

ಸತ್ಯವನ್ನು ದಾಖಲೆ ಮೂಲಕ ಜಗತ್ತಿಗೆ ಸಾರಿರುವ ಜೂಲಿಯಾನ್ ಅಸಾಂಜ್ ಅವರ ಹೆಸರನ್ನು ನೊಬೆಲ್ ಪ್ರಶಸ್ತಿಗೆ ಸೂಚಿಸಬೇಕು ಎಂಬುದಾಗಿಯೂ ಒತ್ತಾಯಿಸಿದೆ. ಅಮೆರಿಕದ ರಹಸ್ಯ ಮಾಹಿತಿಗಳನ್ನು ವಿಕಿಲೀಕ್ಸ್ ಹೊರಹಾಕಿರುವುದರಿಂದ ಉಭಯ ರಾಷ್ಟ್ರಗಳ ಸ್ನೇಹ ಸಂಬಂಧಕ್ಕೆ ಯಾವುದೇ ಧಕ್ಕೆ ಆಗಲಾರದು ಎಂದು ಕ್ರೆಮ್ಲಿನ್ ತಿಳಿಸಿದೆ.

ಏತನ್ಮಧ್ಯೆ, ಅತ್ಯಾಚಾರ ಆರೋಪದಲ್ಲಿ ಸೆರೆ ಸಿಕ್ಕಿರುವ ಅಸಾಂಜ್‌ಗೆ ಜಾಮೀನು ನೀಡಲು ಬ್ರಿಟನ್ ನ್ಯಾಯಾಧೀಶರು ನಿರಾಕರಿಸಿದ್ದಾರೆ. ಇದೀಗ ಅಸಾಂಜ್ ಗಡಿಪಾರು ಕುರಿತು ಕಾನೂನು ಸಮರ ನಡೆಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ