ಮೆಲ್ಬೊರ್ನ್, ಶುಕ್ರವಾರ, 10 ಡಿಸೆಂಬರ್ 2010( 12:18 IST )
79ರ ಹರೆಯದ ಅಜ್ಜನೊಬ್ಬ ಪತ್ನಿಗೆ ಮುತ್ತು ಕೊಡಲು ಹೋದ ಸಂದರ್ಭದಲ್ಲಿ ಆಕೆ ಆತನ ನಾಲಿಗೆಯನ್ನೇ ಕಚ್ಚಿ ತುಂಡು ಮಾಡಿದ ಪರಿಣಾಮ ಅಜ್ಜ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಇಲ್ಲಿನ ಅಮೆರಿಕದ ಮಿಲ್‌ವಾಕೀ ಎಂಬಲ್ಲಿ ನಡೆದಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
79 ವರ್ಷದ ಅಜ್ಜ ಮನೆಯಲ್ಲಿದ್ದ ವೇಳೆ 57ರ ಹರೆಯದ ಪತ್ನಿಗೆ 'ಕಿಸ್' ಕೊಡಲು ಮುಂದಾದ ಸಂದರ್ಭದಲ್ಲಿ ಆಕೆ ಆತನ ನಾಲಿಗೆಯನ್ನೇ ಕಚ್ಚಿ ತುಂಡು ಮಾಡಿದ್ದಳು. ಕೂಡಲೇ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ಅಂಬ್ಯುಲೆನ್ಸ್‌ನಲ್ಲಿ ಅಜ್ಜನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಸರ್ಜರಿ ಮೂಲಕ ಕತ್ತರಿಸಿ ಹೋದ ನಾಲಿಗೆಯ ತುಂಡನ್ನು ಮರು ಜೋಡಿಸಲಾಗಿದೆ ಎಂದು ಶೆಬಾಯ್‌ಗಾನ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು, ಡೊಮೆಸ್ಟಿಕ್ ವಯಲೆನ್ಸ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.