ಲೈಡಾದ ಸಾರ್ವಜನಿಕ ಸ್ಥಳಗಳಲ್ಲಿ ಮುಸ್ಲಿಮ್ ಮಹಿಳೆಯರು ಬುರ್ಖಾ ಧರಿಸುವುದಕ್ಕೆ ನಿಷೇಧ ಹೇರುವ ಮೂಲಕ ಬುರ್ಖಾ ನಿಷೇಧ ಹೇರಿದ ಸ್ಪೇನ್‌ನ ಮೊದಲ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
'ಬುರ್ಖಾವನ್ನು ಅಧಿಕೃತವಾಗಿ ನಿಷೇಧಿಸಿದ ಮೊದಲ ನಗರ ಎಂಬ ಶ್ಲಾಘನೆ ಒಳಗಾಗಿದ್ದು ಇದಕ್ಕೆ ತಾವು ಸಂತಸ ವ್ಯಕ್ತಪಡಿಸುವುದಾಗಿ ಮೇಯರ್ ಆಂಜೆಲ್ ರೋಸ್ ತಿಳಿಸಿದ್ದು, ಇದರಿಂದ ಮಹಿಳೆಯರ ವಿರುದ್ಧದ ಭೇದಭಾವವನ್ನು ತೊಲಗಿಸಿದಂತಾಗಿದೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಮುಸ್ಲಿಮ್ ಮಹಿಳೆಯರು ಬುರ್ಖಾ ತೊಡುವುದಕ್ಕೆ ನಿಷೇಧ ಹೇರಿರುವುದರಿಂದ ಪುರುಷರು ಮತ್ತು ಮಹಿಳೆಯರಿಗೆ ಸಮಾನ ಆದ್ಯತೆ ಕಲ್ಪಿಸಿದಂತಾಗಿದೆ ಎಂದು ವಿವರಿಸಿದ್ದಾರೆ.