ಭ್ರಷ್ಟಾಚಾರದ ಆರೋಪಕ್ಕೆ ಸಿಲುಕಿರುವ ಮಾಜಿ ಪ್ರಧಾನಿ ವಿರುದ್ಧ ಕ್ರೋಯಟಿಯನ್ ಪೊಲೀಸರು ಅಂತಾರಾಷ್ಟ್ರೀಯ ಬಂಧನದ ವಾರಂಟ್ ಅನ್ನು ಜಾರಿಗೊಳಿಸಿದ್ದಾರೆ.
ಮಾಜಿ ಪ್ರಧಾನಿ ಐವೋ ಸಾನ್‌ಡೆರ್ ಅವರ ಮೇಲೆ ವಿಧಿಸಿದ್ದ ರಾಜತಾಂತ್ರಿಕ ಬಂಧನದ ನಿಷೇಧವನ್ನು ಸಂಸತ್ ರದ್ದುಪಡಿಸಿದ ಬೆನ್ನಲ್ಲೇ ದೇಶ ಬಿಟ್ಟು ತೆರಳಿದ್ದರು. ಇದೀಗ ಸಚಿವರು ಸಾನ್‌ಡೆರ್ ವಿರುದ್ಧ ಹೊರಡಿಸಿರುವ ಬಂಧನದ ವಾರಂಟ್ ಅನ್ನು ಇಂಟರ್‌ಪೋಲ್‌ಗೆ ಕಳುಹಿಸಿರುವುದಾಗಿ ವರದಿ ತಿಳಿಸಿದೆ.
ಆದರೆ ಸಾನ್‌ಡೆರ್ ಯಾವ ದೇಶಕ್ಕೆ ತೆರಳಿದ್ದಾರೆಂಬ ವಿಷಯ ತಿಳಿದಿಲ್ಲ. ಸಾನ್‌ಡೆರ್ ಅವರು 2004ರಿಂದ 2009ರವರೆಗೆ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು. ಆ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ಭ್ರಷ್ಟಾಚಾರ ಎಸಗಿದ್ದಾರೆಂಬ ಆರೋಪ ಎದುರಿಸುತ್ತಿದ್ದಾರೆ.
ಇದೀಗ ಮಾಜಿ ಪ್ರಧಾನಿ ಫೋಟೋ ಮತ್ತು ವಿವರಗಳನ್ನು ಪೊಲೀಸರು ವಾಟೆಂಡ್ ಲಿಸ್ಟ್‌ನಲ್ಲಿ ದಾಖಲಿಸಿಕೊಂಡಿದ್ದು, ಅವರ ಶೋಧ ಕಾರ್ಯದಲ್ಲಿ ತೊಡಗಿರುವುದಾಗಿ ತಿಳಿಸಿದ್ದಾರೆ.