ರಷ್ಯಾದ ಹಾಲಿ ಅಧ್ಯಕ್ಷ ಡೆಮಿಟ್ರಿ ಮೆಡ್ವೆಡೇವ್ ಅವರು 2012ರಲ್ಲಿ ತನ್ನ ಅವಧಿ ಅಂತ್ಯಗೊಂಡ ನಂತರ ಮರು ಚುನಾವಣೆ ನಡೆಯಬೇಕೆಂಬ ನಿರೀಕ್ಷೆಯಲ್ಲಿದ್ದಾರೆ ಎಂದು ಕ್ರೆಮ್ಲಿನ್ ಮೂಲವೊಂದು ತಿಳಿಸಿದೆ.
ಡೆಮಿಟ್ರಿ ಅವರ ಅಧ್ಯಕ್ಷಗಾದಿ ಅವಧಿ 2012ಕ್ಕೆ ಅಂತ್ಯಗೊಳ್ಳಲಿದ್ದು, ಆ ನಿಟ್ಟಿನಲ್ಲಿ ಎರಡನೇ ಅವಧಿಗೂ ಅವರು ಅಧ್ಯಕ್ಷರಾಗಿ ಮುಂದುವರಿಯಬೇಕೆಂಬ ಕೂಗು ಹೆಚ್ಚಳವಾಗಿದೆ ಎಂದು ಕ್ರೆಮ್ಲಿನ್ ವಿತ್ತ ಸಚಿವಾಲಯದ ಆರ್ಕಾಡೈ ಡವೋರ್‌ಕೋವಿಚ್ ಅವರು ಸಂದರ್ಶನವೊಂದರಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
2012ರಲ್ಲಿ ತನ್ನ ಅಧ್ಯಕ್ಷಗಾದಿ ಅವಧಿ ಅಂತ್ಯಗೊಂಡ ನಂತರ ಅವರಿಗೆ ಎರಡನೇ ಬಾರಿ ಅಧ್ಯಕ್ಷರಾಗಿ ಮುಂದುವರಿಯಬೇಕೆಂಬ ಇಚ್ಛೆ ಹೊಂದಿಲ್ಲ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಏತನ್ಮಧ್ಯೆ, ಎರಡನೇ ಬಾರಿ ನಡೆಯಲಿರುವ ಅಧ್ಯಕ್ಷಗಾದಿ ಚುನಾವಣೆಯಲ್ಲಿ ಡೆಮಿಟ್ರಿ ಮೆಡ್ವೆಡೇವ್ ಸ್ಪರ್ಧಿಸಿದರೆ ಖಚಿತವಾಗಿಯೂ ಗೆಲುವು ಸಾಧಿಸಲಿದ್ದಾರೆ ಎಂದು ಇತ್ತೀಚೆಗೆ ಬಿಡುಗಡೆಗೊಂಡ ಸಮೀಕ್ಷಾ ವರದಿಯೊಂದು ತಿಳಿಸಿದೆ.