ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 14ರ ಹರೆಯದಲ್ಲಿ ಮದುವೆಯಾದ್ರೆ ತಪ್ಪೇ?: ಮಲೇಶ್ಯಾ ಪೋರಿ (Malaysian Muslim | 14-year-old bride | Kuala Lumpur | marriage)
Bookmark and Share Feedback Print
 
ಭಾರೀ ವಿವಾದದ ನಡುವೆಯೂ 14ರ ಹರೆಯದ ಮಲೇಷ್ಯಾದ ಮುಸ್ಲಿಮ್ ಪೋರಿಯೊಬ್ಬಳು 23 ವರ್ಷದ ಶಿಕ್ಷಕನೊಬ್ಬನನ್ನು ವಿವಾಹವಾಗಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.

ಇಸ್ಲಾಮಿಕ್ ಶರಿಯಾ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ ನಂತರ ಅಪ್ರಾಪ್ತ ಶಾಲಾ ಬಾಲಕಿ ಶಿಟಿ ಮಾರ್ಯಾಮ್ ಮಾಹಮೊದ್ ಎಂಬಾಕೆ ಅಬ್ದುಲ್ ಮಾನಾನ್ ಒತ್‌ಮನ್ ಎಂಬವರ ಜತೆ ಕಳೆದ ವಾರ ಕೌಲಾಲಂಪುರದ ಮಸೀದಿಯೊಂದರಲ್ಲಿ ಅದ್ದೂರಿಯಾಗಿ ವಿವಾಹ ನಡೆದಿತ್ತು.

ಆದರೆ ಇದೀಗ ಈ ಪ್ರಕರಣ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಹೊಸ ಚರ್ಚೆಯೊಂದನ್ನು ಹುಟ್ಟುಹಾಕಿದೆ. ಹಾಗಾಗಿ ಅಪಾಪ್ತ ವಯಸ್ಸಿನ ಮದುವೆ ಕಾನೂನನ್ನು ರದ್ದುಪಡಿಸಬೇಕೆಂದು ರೈಟ್ಸ್ ಗೂಪ್ ಕರೆ ನೀಡಿದೆ.

ಏತನ್ಮಧ್ಯೆ, ಮದುವೆಯಾಗುವುದು ಅವರವರ ವೈಯಕ್ತಿಕ ಹಕ್ಕು. ಆ ನಿಟ್ಟಿನಲ್ಲಿ ಪತ್ನಿಯಾಗಿ ನಾನು ನನ್ನ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸುತ್ತೇನೆ ಎಂದು ವಿವಾದದ ನಂತರ ಶಿಟಿ ಮಾರ್ಯಾಮ್ ಎಂಸ್ಟಾರ್ ವಾರಪತ್ರಿಕೆಯೊಂದಕ್ಕೆ ತಿಳಿಸುತ್ತಾ ಸಮರ್ಥನೆ ಮಾಡಿಕೊಂಡಿದ್ದಾಳೆ.

ತಾನು ಧಾರ್ಮಿಕ ಪಠ್ಯದ ಟೂಷನ್‌ಗೆ ಅಬ್ದುಲ್ ಮಾನಾನ್ ಅವರ ಬಳಿ ಹೋಗುತ್ತಿದ್ದ ಸಮಯದಲ್ಲಿ ಪ್ರೀತಿಸಲು ಆರಂಭಿಸಿರುವುದಾಗಿ ವಿವರಿಸಿರುವ ಆಕೆ. ಈ ಸಂದರ್ಭದಲ್ಲಿ ನಾನು ಅವರನ್ನು ವಿವಾಹವಾಗಲು ನಿರ್ಧರಿಸಿದ್ದೆ. ಅದೇ ಸಮಯದಲ್ಲಿ ಚಿಕ್ಕ ವಯಸ್ಸಿನಲ್ಲಿ ಮದುವೆಯಾಗುತ್ತಿರುವ ನನಗೆ ನನ್ನ ತಾಯಿ ಹೆಂಡತಿಯಾಗಿ ಕರ್ತವ್ಯ ನಿರ್ವಹಿಸುವ ಬಗ್ಗೆ ಮಾರ್ಗದರ್ಶನ ಮಾಡಿರುವುದಾಗಿಯೂ ವಿವರಣೆ ನೀಡಿದ್ದಾಳೆ.

ಅಷ್ಟೇ ಅಲ್ಲ ತನ್ನ ಗಂಡ ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಲು ಒಪ್ಪಿಕೊಂಡಿರುವುದಾಗಿಯೂ ತಿಳಿಸಿದ್ದಾಳೆ. ಮಲೇಷ್ಯಾದಲ್ಲಿ 16 ವರ್ಷದೊಳಗಿನ ಬಾಲಕಿಯವರು ವಿವಾಹವಾಗುವುದು ಶರಿಯಾ ಕೋರ್ಟ್ ಪ್ರಕಾರ ಕಾನೂನು ಬಾಹಿರವಲ್ಲ.
ಸಂಬಂಧಿತ ಮಾಹಿತಿ ಹುಡುಕಿ