ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇರಾಕ್; ಮರಣದಂಡನೆ ನಿರೀಕ್ಷೆಯಲ್ಲಿ 835 ಕೈದಿಗಳು (Iraqi prisons | execution | Baghdad | Bolani | life sentences,)
Bookmark and Share Feedback Print
 
ಭಯೋತ್ಪಾದನಾ ಆರೋಪ ಎದುರಿಸುತ್ತಿರುವ ಸುಮಾರು 8000ಕ್ಕೂ ಅಧಿಕ ಮಂದಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದು, ಅವರೆಲ್ಲ ಶಿಕ್ಷೆ ಜಾರಿ ಬಗ್ಗೆ ಎದುರು ನೋಡುತ್ತಿದ್ದಾರೆ ಎಂದು ಇರಾಕ್ ಆಂತರಿಕ ಸಚಿವ ಜಾವದ್ ಅಲ್ ಬೋಲಾನಿ ತಿಳಿಸಿದ್ದಾರೆ.

ಭಯೋತ್ಪಾದನಾ ನಿಗ್ರಹಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಯೋತ್ಪಾದನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇರಾಕ್ ಕೋರ್ಟ್ 14,500 ಆರೋಪಿಗಳಿಗೆ ಶಿಕ್ಷೆ ವಿಧಿಸಿತ್ತು. ಅದರಲ್ಲಿ ಹೆಚ್ಚಿನವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದರೆ, 835 ಮಂದಿಗೆ ಗಲ್ಲು ಶಿಕ್ಷೆ ವಿಧಿಸಿದೆ.

ಆ ನಿಟ್ಟಿನಲ್ಲಿ ಅವರೆಲ್ಲ ಶಿಕ್ಷೆ ಜಾರಿ ಬಗ್ಗೆ ಎದುರು ನೋಡುತ್ತಿದ್ದಾರೆ ಎಂದ ಸಚಿವರು, ಇರಾಕ್ ಸರಕಾರ ನ್ಯಾಯ ಒದಗಿಸಲು ಪ್ರಯತ್ನಿಸುತ್ತಿರುವುದಾಗಿ ಹೇಳಿದರು.

2005ರಿಂದ 2009ರವರೆಗೆ 230 ಜನರನ್ನು ಗಲ್ಲಿಗೇರಿಸಲಾಗಿದೆ ಎಂದು ಇರಾಕ್ ಸರಕಾರದ ವಕ್ತಾರ ಅಲಿ ಅಲ್ ಡಬ್ಬಾಗ್ ಈ ಹಿಂದೆ ತಿಳಿಸಿದ್ದರು. 2003ರಲ್ಲಿ ಇರಾಕ್‌ನಲ್ಲಿ ಅಮೆರಿಕ ಪಡೆಯ ಸಮರದ ನಂತರ ಗಲ್ಲುಶಿಕ್ಷೆಗೆ ತಾತ್ಕಾಲಿಕ ನಿಷೇಧ ಹೇರಲಾಗಿತ್ತು. ಆದರೆ ಇದೀಗ ಇರಾಕ್ ಪ್ರಧಾನಿ ನೂರಿ ಅಲ್ ಮಲಿಕಿ ಅವರು ಮರಣದಂಡನೆ ಶಿಕ್ಷೆಯ ಪರವಾಗಿದ್ದರೆ, ಅಧ್ಯಕ್ಷ ಜಲಾಲ್ ತಾಲಾಬಾನಿ ಮರಣದಂಡನೆ ಶಿಫಾರಸು ಅರ್ಜಿಗೆ ಗ್ರೀನ್ ಸಿಗ್ನಲ್ ನೀಡಲು ಸಾಧ್ಯವಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ