ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಿಪಿಪಿ ಮೈತ್ರಿಕೂಟಕ್ಕೆ ನಮ್ಮ ಬೆಂಬಲವಿಲ್ಲ; ಜಮಾತ್ ಉಲೇಮಾ (Pakistan | PPP coalition | Jamiat Ulema-e-Islam | Islamabad)
Bookmark and Share Feedback Print
 
ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಅವರು ಸಚಿವ ಸಂಪುಟದಿಂದ ಇಬ್ಬರು ಸಚಿವರನ್ನು ವಜಾಗೊಳಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಆಡಳಿತಾರೂಢ ಪಿಪಿಪಿ ಮೈತ್ರಿಕೂಟದ ಜಮಾತ್ ಉಲೇಮಾ ಇ ಇಸ್ಲಾಮ್ ಸರಕಾರಕ್ಕೆ ಗುಡ್ ಬೈ ಹೇಳಿರುವುದಾಗಿ ಘೋಷಿಸಿದೆ.

ಸಚಿವರನ್ನು ವಜಾಗೊಳಿಸಿರುವ ಪ್ರಕರಣದಲ್ಲಿ ಪಾಕ್ ಸರಕಾರ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ. ಹಾಗಾಗಿ ಆಡಳಿತಾರೂಢ ಸರಕಾರದ ಜತೆ ಕೈಜೋಡಿಸುವ ಇಚ್ಛೆ ನಮಗಿಲ್ಲ ಎಂದು ಜಮಾತ್ ಉಲೇಮಾ ಪಕ್ಷದ ವರಿಷ್ಠ ಮೌಲಾನಾ ಫಾಜ್ಲುರ್ ರೆಹಮಾನ್ ತಿಳಿಸಿದ್ದಾರೆ.

ಪ್ರಧಾನಿ ಅವರ ನಿರ್ಧಾರದಿಂದ ಬೇಸತ್ತು ಜಮಾತ್ ಉಲೇಮಾ ಪಕ್ಷದ ಮತ್ತಿಬ್ಬರು ಸಚಿವರೂ ಕೂಡ ಕೂಡಲೇ ರಾಜೀನಾಮೆ ನೀಡಲಿದ್ದಾರೆ ಎಂದು ಸುದ್ದಿಗಾರರ ಜತೆ ಮಾತನಾಡುತ್ತ ವಿವರಿಸಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆಯೇ ಪಿಪಿಪಿ ಮೈತ್ರಿಕೂಟ ಸರಕಾರಕ್ಕೆ ನೀಡಿರುವ ಬೆಂಬಲ ವಾಪಸ್ ತೆಗೆದುಕೊಳ್ಳುವುದಾಗಿ ಜಮಾತ್ ಬೆದರಿಕೆ ಹಾಕಿತ್ತು.

ಪ್ರಧಾನಿ ಗಿಲಾನಿ ಅವರು ಇಬ್ಬರು ಸಚಿವರನ್ನು ವಜಾಗೊಳಿಸಿದ್ದಾರೆ. ಗಿಲಾನಿ ಅವರು ಪ್ರಮುಖ ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ ತೋರಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಪಾಕಿಸ್ತಾನದ 242 ಸದಸ್ಯ ಬಲದ ನ್ಯಾಷನಲ್ ಅಸೆಂಬ್ಲಿಯಲ್ಲಿ, ಪಿಪಿಪಿ ಮೈತ್ರಿಕೂಟ 126, ಅವಾಮಿ ನ್ಯಾಷನಲ್ ಪಕ್ಷದ 13, ಮುತ್ತಾಹಿದಾ ಖ್ವಾಮಿ ಮೂವ್‌ಮೆಂಟ್ 25, ಪಿಎಂಎಲ್-ಎಫ್-05 ಹಾಗೂ ಬುಡಕಟ್ಟು ಪ್ರದೇಶದ 11 ಶಾಸಕರು ಹಾಗೂ ಜಮಾತ್ ಉಲೇಮಾನ 9 ಶಾಸಕರು ಸೇರಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ