ಇರಾನ್ನ ಆಗ್ನೇಯ ಪ್ರದೇಶದ ಮಸೀದಿ ಸಮೀಪ ಇಬ್ಬರು ಆತ್ಮಹತ್ಯಾ ಬಾಂಬರ್ಗಳು ತಮ್ಮನ್ನು ತಾವು ಸ್ಫೋಟಿಸಿಕೊಂಡ ಪರಿಣಾಮ ಸುಮಾರು 38 ಮಂದಿ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ಬಂದರು ನಗರಿಯಾದ ಚಾಬಾಬಾರ್ನ ಇಮಾಮ್ ಹುಸೈನ್ ಮಸೀದಿಯ ಹೊರಭಾಗದಲ್ಲಿ ಈ ದಾಳಿ ನಡೆದಿರುವುದಾಗಿ ನ್ಯೂಸ್ ಏಜೆನ್ಸಿ ಸುದ್ದಿ ವಿವರಿಸಿದೆ.
ಆತ್ಮಹತ್ಯಾ ಬಾಂಬರ್ಗಳು ಶಿಯಾ ಸಮುದಾಯದ ಸಂತಾಪ ಸಭೆಯಲ್ಲಿ ಪ್ರಾರ್ಥನಾ ನಿರತರಾಗಿದ್ದವರನ್ನು ಗುರಿಯಾಗಿರಿಸಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ದಾಳಿ ಕುರಿತಂತೆ ಈವರೆಗೂ ಯಾವ ಸಂಘಟನೆಗಳೂ ಹೊಣೆ ಹೊತ್ತುಕೊಂಡಿಲ್ಲ.
ಕಳೆದ ಕೆಲವು ದಿನಗಳಿಂದ ದಾಳಿ ನಡೆಸುತ್ತೇವೆ ಎಂಬ ಅನಾಮಧೇಯ ಬೆದರಿಕೆ ಬರುತ್ತಿದ್ದ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ಆದರೂ ಈ ಘಟನೆ ನಡೆದಿರುವುದಾಗಿ ಇರಾನ್ ರೆಡ್ ಕ್ರೆಸೆಂಟ್ ಸೊಸೈಟಿ ಅಧಿಕಾರಿಗಳು ತಿಳಿಸಿದ್ದಾರೆಂದು ಐಎಸ್ಎನ್ಎ ಸುದ್ದಿ ಸಂಸ್ಥೆ ವರದಿ ಮಾಡಿದೆ.