ಪಾಕ್ ಪ್ರಜೆಗೆ ಶಿಕ್ಷೆ-ಅಮೆರಿಕದ ವಿರುದ್ಧ ಪ್ರತೀಕಾರ;ಅಲ್ ಖಾಯಿದಾ
ವಾಷಿಂಗ್ಟನ್, ಗುರುವಾರ, 16 ಡಿಸೆಂಬರ್ 2010( 15:59 IST )
ಅಫ್ಘಾನಿಸ್ತಾನದಲ್ಲಿ ಅಮೆರಿಕದ ಪ್ರಜೆಯನ್ನು ಕೊಲ್ಲಲು ಯತ್ನಿಸಿದ ಆರೋಪದ ಮೇಲೆ ಅಮೆರಿಕ ಕೋರ್ಟ್‌ನಲ್ಲಿ 86 ವರ್ಷ ಜೈಲುಶಿಕ್ಷೆಗೆ ಗುರಿಯಾಗಿರುವ ಪಾಕ್‌ನ ನರವಿಜ್ಞಾನಿ ಆಫಿಯಾ ಸಿದ್ದಿಕಿ ಬಂಧನಕ್ಕೆ ಪ್ರತೀಕಾರ ತೀರಿಸಿಕೊಳ್ಳಬೇಕೆಂದು ಅಲ್ ಖಾಯಿದಾ ಮತ್ತೆ ಕರೆ ನೀಡಿದೆ.
ಅಫಿಯಾ ಸಿದ್ದಿಕಿಗೆ ಜೈಲುಶಿಕ್ಷೆ ವಿಧಿಸಿರುವುದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನಿಯರು ಅಮೆರಿಕದ ವಿಮಾನ, ಕೇಂದ್ರ ಮತ್ತು ರಾಯಭಾರಿಗಳ ಮೇಲೆ ದಾಳಿ ನಡೆಸುವಂತೆ ಅಬು ಯಾಹ್ಯಾ ಅಲ್ ಲಿಬಿ ನೂತನ ವೀಡಿಯೋದಲ್ಲಿ ಕರೆ ನೀಡಿರುವುದನ್ನು ಅಮೆರಿಕ ಮೂಲದ ಮೊನಿಟರಿಂಗ್ ಗ್ರೂಪ್ ಸೈಟ್ ಇಂಟೆಲಿಜೆನ್ಸ್ ಪ್ರಕಟಿಸಿದೆ.
ಅಮೆರಿಕದ ಮಿಲಿಟರಿ ಅಧಿಕಾರಿಗಳು ತನಿಖೆಗೆ ಆಗಮಿಸಿದ ಸಂದರ್ಭದಲ್ಲಿ ಗುಂಡು ಹಾರಿಸಿದ್ದ ಆರೋಪದ ಮೇಲೆ ಸಿದ್ದಿಕಿಯನ್ನು 2008ರಲ್ಲಿ ಅಫ್ಘಾನಿಸ್ತಾನದಲ್ಲಿ ಸೆರೆ ಹಿಡಿಯಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಅಮೆರಿಕ ಕೋರ್ಟ್ 86 ವರ್ಷ ಶಿಕ್ಷೆ ವಿಧಿಸಿತ್ತು.
ಸಿದ್ದಿಕಿ ಬಿಡುಗಡೆ ಆಗ್ರಹಿಸಿ ಪಾಕಿಸ್ತಾನಿಯರು ಎಲ್ಲೆಡೆ ಪ್ರತಿಭಟನೆ ನಡೆಸಬೇಕೆಂದು ಅಲ್ ಖಾಯಿದಾ ಎರಡನೇ ಹಂತದ ನಾಯಕ ಐಮನ್ ಅಲ್ ಜವಾಹರಿ ಕಳೆದ ತಿಂಗಳು ಕರೆ ನೀಡಿದ್ದ.