ಅಮೆರಿಕ ಮತ್ತು ಯುರೋಪಿಯನ್ ದೇಶಗಳ ಮೇಲೆ ಅಲ್ ಖಾಯಿದಾ ದಾಳಿ ನಡೆಸಲುವ ಸಾಧ್ಯತೆ ಇರುವ ಬಗ್ಗೆ ಮಾಹಿತಿ ದೊರೆತಿರುವುದಾಗಿ ಇಂಟರ್‌ಪೋಲ್ ತಿಳಿಸಿದೆ.
ಅಲ್ ಖಾಯಿದಾ ಸಂಭಾವ್ಯ ದಾಳಿ ಕುರಿತು ಬಾಗ್ಲಾದ್‌ನಲ್ಲಿರುವ ಇಂಟರ್‌ಪೋಲ್ ಕಚೇರಿ ಮಾಹಿತಿ ಪಡೆದಿದ್ದು, ಅಮೆರಿಕ ಮತ್ತು ಯುರೋಪ್ ಮೇಲೆ ದಾಳಿ ನಡೆಸುವ ಸಂಚು ರೂಪಿಸಿರುವುದಾಗಿ ವಿವರಿಸಿದೆ. ಈಗಾಗಲೇ ಸುಮಾರು 188 ದೇಶಗಳಿಗೆ ಅಲ್ ಖಾಯಿದಾ ದಾಳಿ ಕುರಿತು ಎಚ್ಚರಿಕೆ ನೀಡಲಾಗಿದೆ ಎಂದು ಇಂಟರ್‌ಪೋಲ್ ವಕ್ತಾರ ತಿಳಿಸಿದ್ದಾರೆ.
ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ಈಗಾಗಲೇ ಯುರೋಪ್‌ನಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಏತನ್ಮಧ್ಯೆ ಸ್ವೀಡನ್‌ನಲ್ಲಿ ಕ್ರಿಸ್‌ಮಸ್ ಹಬ್ಬಕ್ಕಾಗಿ ವಸ್ತುಗಳನ್ನು ಖರೀದಿ ಮಾಡುತ್ತಿದ್ದವರನ್ನು ಗುರಿ ಇಟ್ಟು ಆತ್ಮಹತ್ಯಾ ಬಾಂಬ್ ದಾಳಿ ನಡೆಸಿದ್ದರು ಕೂಡ ಅವರೆಲ್ಲ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು.