ಕ್ಯಾರೆಕ್ಟರ್ ಆಫ್ ಡೆಮೋಕ್ರಸಿಯನ್ನು ಜಾರಿಗೊಳಿಸುವ ನಿರ್ಧಾರ ಅಂತಿಮಗೊಳಿಸಲು ಸಂಬಂಧಿಸಿದಂತೆ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ನೇತೃತ್ವದ ಪಾಕಿಸ್ತಾನ ಪೀಪಲ್ಸ್ ಪಕ್ಷದ ಮೈತ್ರಿಕೂಟ ಸರಕಾರಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ ತಯಾರಿ ನಡೆಸುತ್ತಿರುವುದಾಗಿ ಪಿಎಂಎಲ್ಎನ್ ವರಿಷ್ಠ ನವಾಜ್ ಶರೀಫ್ ತಿಳಿಸಿದ್ದಾರೆ.
ಪಾಕಿಸ್ತಾನ ಪೀಪಲ್ಸ್ ಮೈತ್ರಿಕೂಟ ಸರಕಾರಕ್ಕೆ ಷರತ್ತು ಬದ್ಧ ಬೆಂಬಲ ನೀಡಲು ನಾವು ಸಿದ್ದ ಎಂದು ಸುದ್ದಿಗಾರರ ಜತೆ ಮಾತನಾಡುತ್ತ ವಿವರಿಸಿದ್ದಾರೆ. ಆಡಳಿತಾರೂಢ ಪಿಪಿಪಿ ಮೈತ್ರಿಕೂಟದಿಂದ ಬೆಂಬಲ ವಾಪಸ್ ಪಡೆಯುವುದಾಗಿ ಜಮೈತ್ ಉಲೇಮಾ ಇಸ್ಲಾಮ್ ಪಕ್ಷ ಘೋಷಿಸಿದ ಬೆನ್ನಲ್ಲೇ ಶರೀಫ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರಿಗೆ ಭ್ರಷ್ಟಾಚಾರದ ವಿರುದ್ಧ ಹೋರಾಟ ಮತ್ತು ಕ್ಯಾರೆಕ್ಟರ್ ಆಫ್ ಡೆಮೋಕ್ರಸಿ ಜಾರಿಗೆ ಮುಂದಾಗಬೇಕೆಂದು ಸಲಹೆ ನೀಡಿ ಪತ್ರ ಬರೆದಿರುವುದಾಗಿ ಶರೀಫ್ ತಿಳಿಸಿದ್ದಾರೆ.
ಹಜ್ ಯಾತ್ರಿಕರಿಗೆ ವಸತಿ ಕಲ್ಪಿಸುವಲ್ಲಿ ಅವ್ಯವಹಾರ ನಡೆಸಿದ್ದಾರೆಂದು ಆರೋಪಿಸಿ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಜಮೈತ್ ಉಲೇಮಾ ಇಸ್ಲಾಮ್‌ನ ಇಬ್ಬರು ಸಚಿವರನ್ನು ವಜಾಗೊಳಿಸಿದ್ದರು.