ಕಾನೂನು ಉಲ್ಲಂಘಿಸಿಲ್ಲ
ಅಮೆರಿಕಾಕ್ಕೆ ಸಂಬಂಧಿಸಿದ ರಹಸ್ಯ ದಾಖಲೆಗಳನ್ನು ಬಯಲುಗೊಳಿಸುವ ಮೂಲಕ ವಿವಾದಕ್ಕೆ ಕಾರಣರಾಗಿರುವ ಆಸ್ಟ್ರೇಲಿಯಾ ಮೂಲದ ವಿಕಿಲೀಕ್ಸ್ ಸಂಪಾದಕ ಜುಲಿಯಾನ್ ಅಸಾಂಜ್ ಅವರು ದೇಶದ ಯಾವುದೇ ಕಾನೂನನ್ನು ಉಲ್ಲಂಘಿಸಿಲ್ಲ ಎಂದು ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಜುಲಿಯಾ ಗಿಲಾರ್ಡ್ ಸ್ಪಷ್ಟಪಡಿಸಿದ್ದಾರೆ.