ಅಮೆರಿಕಾಕ್ಕೆ ಸಂಬಂಧಿಸಿದ ರಹಸ್ಯ ದಾಖಲೆಗಳನ್ನು ಬಿಡುಗಡೆ ಮಾಡುವ ಮೂಲಕ ಭಾರಿ ವಿವಾದಕ್ಕೆ ಕಾರಣರಾಗಿರುವ ಆಸ್ಟ್ರೇಲಿಯಾದ ಮೂಲದ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯಾನ್ ಅಸಾಂಜ್, ಗೋಪ್ಯ ದಾಖಲೆಗಳನ್ನು ವೆಬ್‌ಸೈಟ್‌ನಲ್ಲಿ ಬಿಡುಗಡೆಗೊಳಿಸುವ ಪ್ರಕ್ರಿಯೆ ನಿಲ್ಲದು ಎಂದು ಸಾರಿದ್ದಾರೆ.
ಸ್ವೀಡನ್‌ನಲ್ಲಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರವಷ್ಟೇ ಲಂಡನ್ ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದ ಅಸಾಂಜ್, ರಹಸ್ಯ ದಾಖಲೆ ಬಿಡುಗಡೆಯ ಹಿನ್ನೆಲೆಯಲ್ಲಿ ಅಮೆರಿಕಾ ತನ್ನನ್ನು ಗುರಿ ಮಾಡುವ ಸಾಧ್ಯತೆಯಿದೆಯೆಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇಬ್ಬರು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪವನ್ನು ಅಸಾಂಜ್ ಹೊತ್ತಿದ್ದಾರೆ. ಆದರೆ ಈ ಆರೋಪದಲ್ಲಿ ನಾನು ನಿರ್ದೋಷಿ ಎಂದವರು ಸ್ಪಷ್ಟಪಡಿಸಿದ್ದಾರೆ. ಹಾಗೆಯೇ ನನ್ನನ್ನು ಗುರಿ ಮಾಡುವ ತಂತ್ರವು ನಡೆಯುತ್ತಿದೆ ಎಂದು ಆಪಾದಿಸಿದ್ದಾರೆ.
ಲಷ್ಕರ್ ಇ ತೋಯಿಬಾ, ಇಂಡಿಯನ್ ಮುಜಾಹಿದೀನ್ ಮೊದಲಾದ ಇಸ್ಲಾಮಿಕ್ ಸಂಘಟನೆಗಳಿಗಿಂತ ಹಿಂದೂ ಉಗ್ರಗಾಮಿಗಳೇ ಭಾರತಕ್ಕೆ ಅತಿ ದೊಡ್ಡ ಬೆದರಿಕೆ ಎಂಬ ರಾಹುಲ್ ದ್ರಾವಿಡ್ ಹೇಳಿಕೆಯನ್ನು ವಿಕಿಲೀಕ್ಸ್ ಬಹಿರಂಗ ಮಾಡಿರುವುದು ಭಾರತದಲ್ಲಿ ಭಾರಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.