ಭಾರತ ಮತ್ತು ಪಾಕಿಸ್ತಾನ ನಡುವಣ ಬಾಂಧವ್ಯ ವೃದ್ಧಿಗೆ ಎಲ್ಲ ರೀತಿಯ ಸಹಕಾರವನ್ನು ನೀಡುವುದಾಗಿ ಘೋಷಿಸಿರುವ ಒಬಾಮಾ ಆಡಳಿತವು, ಬಿಗು ವಾತಾರಣವನ್ನು ಕುಗ್ಗಿಸುವ ನಿಟ್ಟಿನಲ್ಲಿ ಉಭಯ ದೇಶಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಈ ಹಿಂದಿನ ಪ್ರವಾಸದಲ್ಲಿಯೇ ಉಭಯ ದೇಶಗಳ ನಾಯಕರೊಂದಿಗೆ ಅಮೆರಿಕಾ ಅಧ್ಯಕ್ಷರು ಮಾತುಕತೆ ನಡೆಸಿದ್ದಾರೆ. ಹಾಗೆಯೇ ಬಿಗು ವಾತಾರರಣ ಕುಗ್ಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಶ್ವೇತ ಭವನ ಪತ್ರಿಕಾ ಕಾರ್ಯದರ್ಶಿ ರಾಬರ್ಟ್ ಗಿಬ್ಸ್ ತಿಳಿಸಿದರು.
ಇದೇ ಸಂದರ್ಭದಲ್ಲಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ ರಾಬರ್ಟ್, ಆಂತರಿಕ ಭಯೋತ್ಪಾದನೆ ಮಟ್ಟ ಹಾಕುವುದನ್ನು ಪಾಕಿಸ್ತಾನ ಎಷ್ಟು ಗಂಭೀರವಾಗಿ ಪರಗಣಿಸುತ್ತದೆ ಎಂಬುದು ಮಹತ್ವವೆನಿಸುತ್ತದೆ ಎಂದವರು ಹೇಳಿದರು.
ಭಾರತದ ಆಂತರಿಕ ವಿಚಾರಗಳಲ್ಲಿ ವಾಷ್ಟಿಂಗ್ಟನ್ ತಲೆ ಹಾಕುತ್ತಿದೆ ಎಂಬ ಸಿಪಿಎಂ ಆರೋಪಗಳನ್ನು ತಳ್ಳಿಹಾಕಿರುವ ಅಮೆರಿಕಾ, ವಾಷ್ಟಿಂಗ್ಟನ್‌ನಲ್ಲಿ ಭಾರತ ರಾಯಭಾರಿಗಳು ಏನ್ನನ್ನು ಮಾಡುತ್ತಾರೊ ಅದನ್ನೇ ಭಾರತದಲ್ಲಿ ಅಮೆರಿಕಾ ರಾಯಭಾರಿಗಳು ಮಾಡುತ್ತಿದ್ದಾರೆ ಎಂದು ಕಟುವಾಗಿ ಉತ್ತರಿಸಿದ್ದಾರೆ.
ನಾವು ಭಾರತದೊಂದಿಗೆ ಉತ್ತಮ ಪಾಲುದಾರಿಗೆಯನ್ನು ಹಂಚಿಕೊಂಡಿದ್ದೇವೆ. ಹಾಗೆಯೇ ಹಲವು ಬಗೆಯ ಸಮಸ್ಯೆಗಳನ್ನು ಬಗೆಹರಿಸಲು ಮಾತುಕತೆ ನಡೆಸಲಾಗುತ್ತದೆ ಎಂದು ಹೇಳಿದರು.