ಯುರೋಪ್ ಖಂಡದಲ್ಲಿ ಕಾಣಿಸಿಕೊಂಡಿರುವ ಭಾರಿ ಮಂಜಿನಿಂದಾಗಿ ವಿಮಾನಯಾನ ಸಂಚಾರವು ಬಹುತೇಕ ಅಸ್ತವ್ಯಸ್ತಗೊಂಡಿದೆ. ಜರ್ಮನಿ ಸೇರಿದಂತೆ ಪ್ರಮುಖ ರಾಷ್ಟ್ರಗಳ ಪ್ರಯಾಣಿಕರು ಹಿಮದ ವಾತಾವರಣದಿಂದಾಗಿ ವಿದೇಶ ಪ್ರಯಾಣ ಮೊಟಕುಗೊಳಿಸುವಂತಾಗಿದೆ.
ಮಂಜಿನಿಂದ ಕೂಡಿದ ದಟ್ಟವಾದ ವಾತಾವರಣವು ವಿಮಾನಯಾನ ಸಹಿತ ರೈಲ್ವೇ, ರಸ್ತೆ ಸಂಚಾರಕ್ಕೂ ಅಡ್ಡಿಪಡಿಸಿದೆ. ಕ್ರಿಸ್ಟ್‌ಮಸ್ ಸಮೀಪಿಸುತ್ತಿದ್ದಂತೆಯೇ ಇಂತಹ ಪರಿಸ್ಥಿತಿ ಬಂದೊದಗಿದರಿಂದ ಪ್ರಯಾಣಿಕರು ಸಾಕಷ್ಟು ಇಕ್ಕಟ್ಟಿಗೆ ಸಿಲುಕುವಂತಾಗಿದೆ.
ಶನಿವಾರದಂದು ಜರ್ಮನಿಯಲ್ಲಿ ಮಾತ್ರವಾಗಿ 600ಕ್ಕೂ ಹೆಚ್ಚು ವಿಮಾನಯಾನವನ್ನು ರದ್ದುಗೊಳಿಸಲಾಗಿತ್ತು. ವಿಶ್ವದ ಬಿಡುವಿಲ್ಲದ ವಿಮಾನ ನಿಲ್ದಾಣಗಳಲ್ಲಿ ಒಂದಾಗಿರುವ ಲಂಡನ್ ಹೀತ್‌ಥ್ರೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಭಾನುವಾರ ದ ವರೆಗೂ ಮುಚ್ಚುಗಡೆಗೊಳಿಸಲಾಗಿದೆ.