ವಾಮಚಾರ, ಧಾರ್ಮಿಕ ಮೂಢನಂಬಿಕೆ ಎಲ್ಲೆಡೆ ಸಾರ್ವತ್ರಿಕವಾಗಿದೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ. ತಾಯಿಯೊಬ್ಬಳು ತನ್ನ ನಾಲ್ಕು ವರ್ಷದ ಮಗಳನ್ನೇ ಕೊಂದು ಆಕೆಯ ಹೃದಯ ಹಾಗೂ ವಿವಿಧ ಅಂಗಗಳನ್ನು ಕತ್ತರಿಸಿ ಹಾಕಿರುವ ದಾರುಣ ಘಟನೆ ಬ್ರಿಟನ್‌ನಲ್ಲಿ ನಡೆದಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ಧಾರ್ಮಿಕ ವಿಧಿಯ ಅಂಗವಾಗಿ ಸೋಮಾಲಿಯ ಮೂಲದ ಶಾಯ್ನಾ ಭಾರುಚಿ (35) ಎಂಬಾಕೆ ತನ್ನ ನಾಲ್ಕರ ಹರೆಯದ ಮಗಳ ಅಂಗಾಂಗಳನ್ನೇ ಕತ್ತರಿಸಿ ಬಲಿ ತೆಗೆದುಕೊಂಡಿದ್ದಾಳೆ. ತನ್ನ ಮಗಳ ಹೃದಯ ಹಾಗೂ ವಿವಿಧ ಅಂಗಗಳನ್ನು ಕತ್ತರಿಸಿ ಅಡುಗೆ ಕೋಣೆಯಲ್ಲಿ ಇಟ್ಟಿರುವುದಾಗಿ ವರದಿ ವಿವರಿಸಿದೆ.
ಇದೀಗ ಹಂತಕಿ ತಾಯಿ ಪೊಲೀಸರ ಅತಿಥಿಯಾಗಿದ್ದಾಳೆ. ಅಲ್ಲದೇ ಆಕೆಯ ಜೊತೆಗಾರ ಜೆರೋಮ್ ನೆಗ್ನೈಯನ್ನು ಕೂಡ ಬಂಧಿಸಿದ್ದಾರೆ. ಶಾಯ್ನಾ ಮುಸ್ಲಿಮ್ ಧರ್ಮಕ್ಕೆ ಮತಾಂತರ ಹೊಂದಿರುವುದಾಗಿಯೂ ಪೊಲೀಸರು ಶಂಕಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.