ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹನೀಫ್ ಉಗ್ರ ಅಲ್ಲ; ಆಸಿಸ್ ಸರಕಾರದಿಂದ ಭರ್ಜರಿ ಪರಿಹಾರ (Australian government | Mohammad Haneef | UK terror attack | get AUD 1 mn)
ಆಸ್ಟ್ರೇಲಿಯಾ, ಮಂಗಳವಾರ, 21 ಡಿಸೆಂಬರ್ 2010( 15:30 IST )
ಲಂಡನ್‌ನ ಗ್ಲಾಸ್ಕೋ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ್ದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರ ಎಂದು ಆರೋಪಿಸಿ ಸೆರೆಹಿಡಿಯಲ್ಪಟ್ಟು ಬಂಧಮುಕ್ತಗೊಂಡಿದ್ದ ಭಾರತದ ವೈದ್ಯ ಮೊಹಮ್ಮದ್ ಹನೀಫ್‌ಗೆ ಇದೀಗ ಆಸ್ಟ್ರೇಲಿಯಾ ಸರಕಾರ ಬೃಹತ್ ಮೊತ್ತದ ಪರಿಹಾರ ನೀಡಲು ಮುಂದಾಗಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
2007ರಲ್ಲಿ ಲಂಡನ್‌ನ ಗ್ಲಾಸ್ಕೋ ಏರ್‌ಪೋರ್ಟ್ ದಾಳಿ ಪ್ರಕರಣದಲ್ಲಿ ಡಾ.ಹನೀಫ್ ಉಗ್ರಗಾಮಿ ಎಂದು ಆಸ್ಟ್ರೇಲಿಯಾ ಸರಕಾರ ಆರೋಪಿಸಿ ಮೊಕದ್ದಮೆ ದಾಖಲಿಸಿತ್ತು. ಆದರೆ ಡಾ.ಮೊಹಮ್ಮದ್ ಹನೀಫ್ ಈ ಬಗ್ಗೆ ಕೋರ್ಟ್ ಕಟಕಟೆ ಏರಿದ್ದರು. ವಿಚಾರಣೆಯಲ್ಲಿ ಹನೀಫ್ ಉಗ್ರಗಾಮಿ ಹಣೆಪಟ್ಟಿಯಿಂದ ಮುಕ್ತಗೊಂಡಿದ್ದ. ತದನಂತರ ಹನೀಫ್ ಆಸ್ಟ್ರೇಲಿಯಾ ಸರಕಾರದ ವಿರುದ್ಧವೇ ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಹನೀಫ್‌ಗೆ ಪರಿಹಾರ ನೀಡುವಂತೆ ಆಸೀಸ್ ಸರಕಾರಕ್ಕೆ ಆದೇಶ ನೀಡಿದೆ.
ಇದೀಗ ಉಗ್ರಗಾಮಿ ಎಂಬ ಹಣೆಪಟ್ಟಿಯಿಂದ ಮುಕ್ತಗೊಂಡಿದ್ದ ಡಾ.ಹನೀಫ್‌ಗೆ ಆಸ್ಟ್ರೇಲಿಯಾ ಸರಕಾರ ಅಂದಾಜು 4.5 ಕೋಟಿ ಡಾಲರ್ ಮೊತ್ತದ ಪರಿಹಾರ ನೀಡಲು ನಿರ್ಧರಿಸಿದೆ. ಕೋರ್ಟ್ ತೀರ್ಪಿನಿಂದ ಸಂತಸಗೊಂಡಿರುವುದಾಗಿ ಡಾ.ಹನೀಫ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಗ್ಲಾಸ್ಕೋ ಏರ್‌ಪೋರ್ಟ್ ದಾಳಿ ಪ್ರಕರಣದಲ್ಲಿ ನನ್ನನ್ನು ಅನಾವಶ್ಯಕವಾಗಿ ಬಂಧಿಸಿ, ಉಗ್ರಗಾಮಿ ಎಂದು ಆಸ್ಟ್ರೇಲಿಯಾ ಸರಕಾರ ಹಣೆಪಟ್ಟಿ ಕಟ್ಟಿತ್ತು. ಇದು ನಿಜಕ್ಕೂ ನನ್ನ ಜೀವನದ ಕಹಿ ಘಟನೆಯಾಗಿದೆ. ಇದೀಗ ಎಲ್ಲಾ ಅನುಮಾನಗಳಿಗೂ ಮುಕ್ತಿ ದೊರೆತಿದೆ. ಅಲ್ಲದೇ ಕೋರ್ಟ್ ಆದೇಶದಿಂದ ತನಗೆ ಸಂತೋಷವಾಗಿದ್ದು, ಇನ್ನು ತಾನು ನಿಶ್ಚಿಂತೆಯಿಂದ ಕುಟುಂಬದ ಜತೆ ಬದುಕಲು ಅವಕಾಶವಾದಂತಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.