ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕೊಕೇನ್ ಸಾಗಾಟ; ಮಾಜಿ ಗಗನಸಖಿಗೆ 8 ವರ್ಷ ಜೈಲುಶಿಕ್ಷೆ (air hostess | Indian-origin | cocaine | sentenced | Mandeep Shahi,)
Bookmark and Share Feedback Print
 
ಸುಮಾರು 400,000 ಅಮೆರಿಕನ್ ಡಾಲರ್ ಮೌಲ್ಯದ ಡ್ರಗ್ಸ್ ಕಳ್ಳಸಾಗಾಣೆ ಮಾಡುತ್ತಿದ್ದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಮೂಲದ ಏರ್ ಕೆನಡಾ ಮಾಜಿ ಗಗನಸಖಿಗೆ ಬ್ರಿಟನ್ ಕೋರ್ಟ್ ಎಂಟು ವರ್ಷಗಳ ಜೈಲುಶಿಕ್ಷೆ ವಿಧಿಸಿದೆ.

ಇದೊಂದು ಬೃಹತ್ ಪ್ರಮಾಣದ ಕೊಕೇನ್ ಜಾಲ ಎಂದು ಪೊಲೀಸರು ಗಂಭೀರವಾಗಿ ಆರೋಪಿಸಿ ಮಾಜಿ ಗಗನಸಖಿ ವಿರುದ್ಧ ಮೊಕದ್ದಮೆ ದಾಖಲಿಸಿದ್ದರು. ಮನ್‌ದೀಪ್ ಶಾ (27) ಎಂಬಾಕೆ ತನ್ನ ಮಾಜಿ ಶಾಲಾ ಬಾಲಕನ ಜೊತೆಯಲ್ಲಿ ಸುಮಾರು ನಾಲ್ಕು ಕೆಜಿ ಕೊಕೇನ್ ಸಾಗಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಳು. ಪ್ರಕರಣದ ವಿಚಾರಣೆ ನಡೆಸಿದ ಸೌತ್‌ವಾರ್ಕ್ ಕ್ರೌನ್ ಕೋರ್ಟ್ ಎಂಟು ವರ್ಷಗಳ ಜೈಲುಶಿಕ್ಷೆ ನೀಡಿದೆ.

ಮನ್‌ದೀಪ್ ಶಾ ಕಳೆದ ಮಾರ್ಚ್ ತಿಂಗಳಿನಲ್ಲಿ ಕೆನಡಾದಿಂದ ಹೀಥ್ರೂಗೆ ತೆರಳುತ್ತಿದ್ದ ವಿಮಾನದಲ್ಲಿಯೇ ಮಾದಕ ವಸ್ತು ಸಾಗಿಸುತ್ತಿದ್ದಳು. ಈ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಆಕೆ ರೆಡ್ ಹ್ಯಾಂಡ್ ಆಗಿ ಪೊಲೀಸರ ಅತಿಥಿಯಾಗಿದ್ದಳು.
ಸಂಬಂಧಿತ ಮಾಹಿತಿ ಹುಡುಕಿ