ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹನೀಫ್ ಉಗ್ರ ಅಲ್ಲ; ಕ್ಷಮೆ ಕೋರಿದ ಆಸೀಸ್ ಸರಕಾರ (Mohammed Haneef | Australian government | apologised | Indian)
Bookmark and Share Feedback Print
 
PTI
ಭಯೋತ್ಪಾದನೆ ಆರೋಪ ಹೊರಿಸಿ ಬಂಧಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಸರಕಾರ ಇದೀಗ ಭಾರತೀಯ ವೈದ್ಯ ಮೊಹಮ್ಮದ್ ಹನೀಫ್ ಅವರ ಕ್ಷಮೆ ಕೋರಿ, ತಮ್ಮಿಂದ ತಪ್ಪಾಗಿದೆ ಎಂದು ಒಪ್ಪಿಕೊಂಡಿದೆ.

ಗ್ಲಾಸ್ಕೋ ಏರ್ ಫೋರ್ಟ್ ದಾಳಿ ಪ್ರಕರಣದಲ್ಲಿ ಹನೀಫ್ ಅವರನ್ನು ಉಗ್ರ ಎಂದು ಬಿಂಬಿಸಿ ಬಂಧಿಸಿರುವುದಕ್ಕೆ ಆಸ್ಟ್ರೇಲಿಯಾ ಸರಕಾರ ಪ್ರಾಥಮಿಕ ಕ್ಷಮಾಪಣೆ ಪತ್ರವನ್ನು ರವಾನಿಸಿದೆ. ಅಷ್ಟೇ ಅಲ್ಲ ಆಸೀಸ್ ಸರಕಾರ ಭಾರೀ ಮೊತ್ತದ ಪರಿಹಾರವನ್ನು ನೀಡಿದೆ. ಆದರೆ ಪರಿಹಾರದ ಮೊತ್ತ ಎಷ್ಟು ಎಂಬುದು ಇನ್ನೂ ಬಹಿರಂಗವಾಗಿಲ್ಲ.

ಅಮಾಯಕ ಡಾ.ಹನೀಫ್ ಅವರನ್ನು ನಾವು ತಪ್ಪಾಗಿ ಬಂಧಿಸಿದ್ದೇವು. ಈ ಬಗ್ಗೆ ನಾವು ಕ್ಷಮೆ ಕೋರುವುದಾಗಿ ಆಸ್ಟ್ರೇಲಿಯನ್ ಫೆಡರಲ್ ಪೊಲೀಸ್ ಅಧಿಕಾರಿಗಳು ಹೇಳಿರುವುದಾಗಿ ವರದಿಯೊಂದು ತಿಳಿಸಿದೆ.

ಆ ನಿಟ್ಟಿನಲ್ಲಿ ಡಾ.ಹನೀಫ್ ಅವರಿಗೆ ಪರಿಹಾರವನ್ನು ಪಾವತಿ ಮಾಡಲಾಗಿದೆ. ಕ್ಷಮೆಯನ್ನೂ ಕೇಳಿರುವುದರಿಂದ ಅವರ ಮೇಲೆ ಸಾರ್ವಜನಿಕ ವಲಯ ಅನುಮಾನದೃಷ್ಟಿ ಹೊಂದಿರುವುದು ಇದರಿಂದ ಮುಕ್ತಿಗೊಂಡಂತಾಗಿದೆ. ಹಾಗಾಗಿ ಹನೀಫ್ ಅವರು ತಮ್ಮ ಜೀವನವನ್ನು ನಿರಾತಂಕವಾಗಿ ಸಾಗಿಸಬಹುದಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ ಎಂದು ವರದಿ ಹೇಳಿದೆ.

ಆಸ್ಟ್ರೇಲಿಯಾದ ಅಟಾರ್ನಿ ಜನರಲ್ ಡಿಪಾರ್ಟ್‌ಮೆಂಟ್ ಬುಧವಾರ ಕ್ಷಮಾಪಣೆ ಪತ್ರವನ್ನು ಬುಧವಾರ ಬಿಡುಗಡೆ ಮಾಡಿತ್ತು. ಇದರಿಂದಾಗಿ ಡಾ.ಹನೀಫ್ ಅಮಾಯಕ ಎಂಬುದು ಸಾಬೀತಾದಂತಾಗಿದೆ ಎಂದು ವಕೀಲ ರೋಡ್ ಹೋಡ್‌ಗಾ‌ಸನ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ