ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್: ಹಿಂದೂ ಧಾರ್ಮಿಕ ಮುಖಂಡ ಚಾಂದ್ ಅಪಹರಣ (Pakistan | Hindu spiritual leader | kidnapped | Lakki Chand Garji,)
Bookmark and Share Feedback Print
 
ಮದುವೆ ಕಾರ್ಯಕ್ರಮವೊಂದಕ್ಕೆ ಪಾಕಿಸ್ತಾನದ ಪ್ರಮುಖ ಧಾರ್ಮಿಕ ಮುಖಂಡರೊಬ್ಬರು ತೆರಳುತ್ತಿದ್ದ ಸಂದರ್ಭದಲ್ಲಿ ಅಪಹರಿಸಿರುವ ಘಟನೆ ಬಲೂಚಿಸ್ತಾನ ಪ್ರಾಂತ್ಯದಲ್ಲಿ ನಡೆದಿದೆ.

ಕಾಲಾಟ್ ನಗರದ ಕಾಳಿ ಮಾತಾ ಮಂದಿರದ ಮಹಾರಾಜ್ ಲಕ್ಕಿ ಚಾಂದ್ ಗಾರ್ಜಿ (82) ಪಾಕಿಸ್ತಾನದ ಪ್ರತಿಷ್ಠಿತ ಹಿಂದೂ ಧಾರ್ಮಿಕ ಮುಖಂಡರಾಗಿದ್ದಾರೆ. ಅವರನ್ನು ಮಂಗಳವಾರ ರಾತ್ರಿ ಕಿಡ್ನಾಪ್ ಮಾಡಲಾಗಿದೆ ಎಂದು ದಿ ಎಕ್ಸ್‌ಪ್ರೆಸ್ ಟ್ರೈಬೂನ್ ಪತ್ರಿಕೆ ಗುರುವಾರ ವರದಿ ಮಾಡಿದೆ.

ಸ್ವಾಮೀಜಿ ಅಪಹರಣವಾದ ಸುದ್ದಿ ತಿಳಿಯುತ್ತಿದ್ದಂತೆಯೇ ಹಿಂದೂ ಸಮುದಾಯದ ನೂರಾರು ಸದಸ್ಯರು ಕರಾಚಿ ಮತ್ತು ಕ್ವೆಟ್ಟಾ ಸಂಪರ್ಕಿಸುವ ಹೈವೇ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಬಂದ್‌ನಿಂದ ಹಲವು ಗಂಟೆಗಳ ಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು. ಇದೀಗ ಪ್ರಕರಣದ ಕುರಿತಂತೆ ಧಾರ್ಮಿಕ ಮುಖಂಡ ಚಾಂದ್ ಅವರನ್ನು ಅಪಹರಣಕಾರರಿಂದ ಕೂಡಲೇ ಬಂಧಮುಕ್ತಗೊಳಿಸಿ ಕರೆ ತರುವಂತೆ ಹಿಂದೂಗಳು ಒತ್ತಾಯಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ