ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 26/11-ಐಎಸ್ಐ ಚೀಫ್ ಅಮೆರಿಕ ಕೋರ್ಟ್‌ಗೆ ಹಾಜರಾಗಲ್ಲ: ಪಾಕ್ (Yousaf Raza Gilani | Pakistan | US court | Mumbai terror attack | ISI)
Bookmark and Share Feedback Print
 
ಮುಂಬೈ ಭಯೋತ್ಪಾದನಾ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಸ್ಐ ಮುಖ್ಯಸ್ಥ ಅಮೆರಿಕದ ಯಾವುದೇ ಕೋರ್ಟ್‌ಗೂ ಹಾಜರಾಗುವುದಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಗುರುವಾರ ಘೋಷಿಸಿದ್ದಾರೆ.

ನ್ಯಾಷನಲ್ ಅಸೆಂಬ್ಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂಟರ್ ಸರ್ವಿಸ್ ಇಂಟೆಲಿಜೆನ್ಸ್ (ಐಎಸ್ಐ) ಪಾಕಿಸ್ತಾನ ಮಿಲಿಟರಿಯ ಸೂಕ್ಷ್ಮವಾದ ಏಜೆನ್ಸಿಯಾಗಿದೆ. ಹಾಗಾಗಿ ಐಎಸ್ಐ ಅಧಿಕಾರಿಗಳಿಗೆ ಬಲವಂತವಾಗಿ ಅಮೆರಿಕದ ಕೋರ್ಟ್‌ಗೆ ಹಾಜರಾಗಿ ವಿವರಣೆ ನೀಡಿ ಎಂದು ಹೇಳುವುದು ಊಹಿಸಲು ಸಾಧ್ಯವಿಲ್ಲದ ಮಾತು ಎಂದು ಸ್ಪಷ್ಟಪಡಿಸಿದ್ದಾರೆ.

ಅಸೆಂಬ್ಲಿಯಲ್ಲಿ ವಿರೋಧ ಪಕ್ಷದ ಮುಖಂಡ ನಿಸಾರ್ ಅಲಿ ಖಾನ್ ಅವರ ಭಾಷಣದ ನಂತರ ಅದಕ್ಕೆ ಪ್ರತಿಕ್ರಿಯೆಯಾಗಿ ಗಿಲಾನಿ ಈ ಹೇಳಿಕೆ ನೀಡಿದ್ದಾರೆ.

ಮುಂಬೈ ಭಯೋತ್ಪಾದನಾ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್‌ನ ಬ್ರೂಕ್ಲೈನ್ ಕೋರ್ಟ್ ಐಎಸ್ಐ ವರಿಷ್ಠ ಅಹ್ಮದ್ ಶೂಜಾ ಪಾಶಾ ಹಾಗೂ ಇಬ್ಬರು ಅಧಿಕಾರಿಗಳಿಗೆ ಸಮನ್ಸ್ ಜಾರಿ ಮಾಡಿತ್ತು. ದಾಳಿ ಪ್ರಕರಣದ ಕುರಿತು ಅಮೆರಿಕದ ಐದು ಪ್ರಜೆಗಳು ಅಮೆರಿಕದ ಕಾನೂನಿನ್ವಯ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ