ಸ್ವಿಸ್ ರಾಯಭಾರಿ ಕಚೇರಿಯಲ್ಲಿ ಗುರುವಾರ ಬಾಂಬ್ ಸ್ಫೋಟ ಸಂಭವಿಸಿದ ಬೆನ್ನಲ್ಲೇ, ಇಟಲಿ ರಾಜಧಾನಿ ರೋಮ್‌ನಲ್ಲಿರುವ ಚಿಲಿ ರಾಯಭಾರಿ ಕಚೇರಿಯಲ್ಲೂ ಬಾಂಬ್ ಸ್ಫೋಟ ಸಂಭವಿಸಿದ್ದು, ಓರ್ವ ವ್ಯಕ್ತಿ ಗಾಯಗೊಂಡಿರುವುದಾಗಿ ಎಎನ್ಎಸ್ಎ ನ್ಯೂಸ್ ಏಜೆನ್ಸಿ ತಿಳಿಸಿದೆ.
ಸ್ವಿಸ್ ರಾಯಭಾರಿ ಕಚೇರಿಯಲ್ಲಿ ಅಧಿಕಾರಿಯೊಬ್ಬರು ಪ್ಯಾಕ್‌ವೊಂದನ್ನು ಓಪನ್ ಮಾಡಿದಾಗ ಸ್ಫೋಟಗೊಂಡಿದ್ದು, ಆ ವ್ಯಕ್ತಿಯೂ ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿ ಹೇಳಿದೆ. ಈ ಘಟನೆ ನಡೆದ ಸ್ವಲ್ಪ ಹೊತ್ತಿನಲ್ಲಿಯೇ ರೋಮ್‌ನ ಚಿಲಿಯನ್ ರಾಯಭಾರಿ ಕಚೇರಿಯಲ್ಲೂ ಸ್ಫೋಟ ಸಂಭವಿಸಿದೆ ಎಂದು ವಿವರಿಸಿದೆ.
ಇಟಲಿಯಲ್ಲಿ ವಾರದಿಂದೀಚೆಗೆ ಸರಕಾರದ ಜನವಿರೋಧಿ ನೀತಿಯನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಸಲಾಗಿತ್ತು. ಅಷ್ಟೇ ಅಲ್ಲ ತುಂಬಾ ಹಿಂಸಾಚಾರವೂ ಸಂಭವಿಸಿತ್ತು. ಇದೀಗ ಬಾಂಬ್ ಸ್ಫೋಟ ಘಟನೆ ಕುರಿತು ಪೊಲೀಸ್ ಅಧಿಕಾರಿಗಳು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ಸ್ಫೋಟದ ಹಿಂದೆ ಯಾರ ಕೈವಾಡ ಇದೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.