ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಿಚಿತ್ರ ಪ್ರತಿಭಟನೆ...ಸಂಸತ್ ಬಾಲ್ಕನಿಯಿಂದ ಕೆಳಕ್ಕೆ ಹಾರಿದ ಭೂಪ! (Romanian | Parliament balcony | technician jumped off | Adrian Sobaru)
Bookmark and Share Feedback Print
 
ಪ್ರಧಾನಿಯವರು ಸಂಬಳ ಕಡಿತಗೊಳಿಸುವ ನಿರ್ಧಾರಕ್ಕೆ ಮುಂದಾಗಿರುವುದನ್ನು ಪ್ರತಿಭಟಿಸಿ ಪಬ್ಲಿಕ್ ಟೆಲಿವಿಷನ್ ಟೆಕ್ನಿಷಿಯನ್‌ನೊಬ್ಬ ಸಂಸತ್ ಭವನದ ಬಾಲ್ಕನಿಯಿಂದಲೇ ಕೆಳಗೆ ಹಾರಿ ಗಾಬರಿ ಹುಟ್ಟಿಸಿರುವ ಘಟನೆ ರೋಮಾನಿಯಾದಲ್ಲಿ ಶುಕ್ರವಾರ ನಡೆದಿದೆ.

40ರ ಹರೆಯದ ಅಡ್ರಿಯಾನ್ ಸೋಬಾರು ಎಂಬ ವ್ಯಕ್ತಿ ಪ್ರಧಾನಿ ಎಮಿಲ್ ಬೋಕ್ ವಿಶ್ವಾಸ ಮತ ಯಾಚನೆ ಹಿನ್ನೆಲೆಯಲ್ಲಿ ಸಂಸತ್‌ನಲ್ಲಿ ಭಾಷಣ ಮಾಡುತ್ತಿರುವ ಸಂದರ್ಭದಲ್ಲಿಯೇ ಮೇಲ್ ಅಂತಸ್ತಿನಿಂದ ದಿಢೀರ್ ಅಂತ ಕೆಳಗೆ ಹಾರಿದ್ದ. ಈ ದೃಶ್ಯವನ್ನು ನ್ಯಾಷನಲ್ ಟಿವಿ ನೇರಪ್ರಸಾರವನ್ನೂ ಕೂಡ ಮಾಡಿತ್ತು.

ಅಡ್ರಿಯಾನ್ ಸುಮಾರು 20 ಅಡಿ ಎತ್ತರದಲ್ಲಿ ನಿಂತಿದ್ದ ಆತ, 'ನೀವು (ಪ್ರಧಾನಿಗೆ) ನಮ್ಮ ಮಕ್ಕಳ ಭವಿಷ್ಯವನ್ನು ಕೊಂದು ಬಿಡುತ್ತೀರಿ' ಎಂದು ಕೂಗಿ ಮೇಲಿನಿಂದ ಕೆಳಕ್ಕೆ ಹಾರಿದ್ದ. ಆತ ಗಂಭೀರವಾಗಿ ಗಾಯಗೊಂಡಿರುವುದಾಗಿ ಸಂಸತ್ ಭವನದ ಅಧಿಕಾರಿಗಳು ತಿಳಿಸಿದ್ದಾರೆ. ಆತ ಮೇಲಿನಿಂದ ಕೆಳಕ್ಕೆ ಸಂಸತ್ ಭವನದ ಡೆಸ್ಕ್ ಮೇಲೆ ಬಿದ್ದ ಹೊಡೆತಕ್ಕೆ ಅದು ಮುರಿದು ಹೋಗಿರುವುದಾಗಿ ಹಾಟ್ ನ್ಯೂಸ್ ತಿಳಿಸಿದೆ.

ರೋಮಾನಿಯಾ ಸರಕಾರ ಸಿವಿಲ್ ಸರ್ವೆಂಟ್ಸ್‌ಗಳ ಸಂಬಳದಲ್ಲಿ ಶೇ.25ರಷ್ಟು ಕಡಿತಗೊಳಿಸಲು ನಿರ್ಧರಿಸಿತ್ತು. ಆ ನಿಟ್ಟಿನಲ್ಲಿ ತಮ್ಮ ಜೀವನ ಸಾಗಿಸಲು ಭಾರೀ ಹೊಡೆತ ಬೀಳಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಅಡ್ರಿಯಾನ್ ಸಂಸತ್‌ನೊಳಗೆ ಈ ಪರಿಯಾಗಿ ಪ್ರತಿಭಟನೆ ನಡೆಸಿದ್ದ.
ಸಂಬಂಧಿತ ಮಾಹಿತಿ ಹುಡುಕಿ