ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭುಟ್ಟೋ ಹತ್ಯೆ; ಮುಷರ್ರಫ್‌ಗೆ ಮತ್ತೆ ಪ್ರಶ್ನೆ ರವಾನೆ (Benazir Bhutto murder | Musharraf | Pakistan | questionnaire)
Bookmark and Share Feedback Print
 
ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷ ಪರ್ವೆಜ್ ಮುಷರ್ರಫ್ ಅವರಿಗೆ ತನಿಖೆಯ ಹಿನ್ನೆಲೆಯಲ್ಲಿ ಪ್ರಶ್ನಾವಳಿಯನ್ನು ಮತ್ತೊಮ್ಮೆ ಕಳುಹಿಸಿರುವುದಾಗಿ ಪಾಕಿಸ್ತಾನ ಆಂತರಿಕ ಸಚಿವಾಲಯ ತಿಳಿಸಿದೆ.

ಸ್ವಯಂ ಗಡಿಪಾರುಗೊಂಡು ಲಂಡನ್‌ನಲ್ಲಿ ವಾಸ್ತವ್ಯ ಹೂಡಿರುವ ಮುಷರ್ರಫ್ ಅವರಿಗೆ ಶುಕ್ರವಾರ ಪ್ರಶ್ನಾವಳಿಯನ್ನು ಕಳುಹಿಸಲಾಗಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಭುಟ್ಟೋ ಹತ್ಯೆ ಪ್ರಕರಣ ಕುರಿತಂತೆ ಗುರುವಾರ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಬಂಧಿಸಲಾಗಿತ್ತು.

ಉತ್ತರ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ 2007 ಡಿಸೆಂಬರ್ 27ರಂದು ಚುನಾವಣಾ ಪ್ರಚಾರ ರಾಲಿಯಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದ ವೇಳೆ ಭುಟ್ಟೋ ಅವರನ್ನು ಹತ್ಯೆಗೈಯಲಾಗಿತ್ತು.

ಘಟನೆಯ ನಂತರ ಭುಟ್ಟೋ ಅವರನ್ನು ತಾಲಿಬಾನ್ ಸಂಚು ರೂಪಿಸಿ ಹತ್ಯೆಗೈದಿರುವುದಾಗಿ ಆಂತರಿಕ ಸಚಿವಾಲಯ ಆರೋಪಿಸಿತ್ತು. ಅಲ್ಲದೇ ಈ ಪ್ರಕರಣದಲ್ಲಿ ಮುಷ್ ಕೂಡ ಭಾಗಿ ಎಂದೂ ದೂರಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ