ಯೆಮೆನ್ ಮೂಲದ ಅಲ್ ಖಾಯಿದಾ ಗುಂಪು ಟೆರರಿಸ್ಟ್ ಸಂಘಟನೆ ಎಂದು ಕೆನಡಾ ಸರಕಾರ ಘೋಷಿಸಿದ್ದು, ಅಲ್ ಖಾಯಿದಾ ದೇಶದೊಳಕ್ಕೆ ಪ್ರವೇಶಿಸಲು ನಿಷೇಧ ಕೂಡ ಹೇರಿರುವುದಾಗಿ ತಿಳಿಸಿದೆ.
ಆ ನಿಟ್ಟಿನಲ್ಲಿ ಅಲ್ ಖಾಯಿದಾ ಅರೆಬಿಯನ್ ಪೆನಿನ್‌ಸುಲಾ (ಎಕ್ಯೂಎಪಿ)ಯ ಬೆಂಬಲಿಗರು ಒಂದು ವೇಳೆ ದೇಶದಲ್ಲಿ ಪತ್ತೆಯಾದರೆ ಅವರನ್ನು ಬಂಧಿಸಲಾಗುವುದು ಎಂದು ಕೆನಡಾ ಸರಕಾರ ಎಚ್ಚರಿಕೆ ನೀಡಿದೆ.
ಜಾಗತಿಕ ಮಟ್ಟದಲ್ಲಿ ತಲೆನೋವಾಗಿರುವ ಅಲ್ ಖಾಯಿದಾ ಸಂಘಟನೆಯ ಶಾಖೆ ಯೆಮೆನ್‌ನಲ್ಲಿ ಕೆಲವು ವರ್ಷಗಳಿಂದ ಕಾರ್ಯಾಚರಿಸುತ್ತಿದೆ. ಇತ್ತೀಚೆಗೆ ಅರೆಬಿಯನ್ ಪ್ರಾಂತ್ಯದ ಈ ಉಗ್ರಗಾಮಿ ಸಂಘಟನೆ ಹಲವು ಸ್ಫೋಟ ಸಂಚುಗಳನ್ನು ನಡೆಸಿದೆ. ಈ ಹಿನ್ನೆಲೆಯಲ್ಲಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ.