ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿಗೆ 40 ಮಂದಿ ಬಲಿ (World Food Programme | Suicide bombing | Pakistan)
Bookmark and Share Feedback Print
 
ದೇಶದ ಆಗ್ನೇಯ ಭಾಗದಲ್ಲಿರುವ ನಗರದಲ್ಲಿ ಆತ್ಮಾಹುತಿ ಮಹಿಳಾ ಬಾಂಬರ್, ಆಹಾರ ವಿತರಣಾ ಕೇಂದ್ರದಲ್ಲಿ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದರಿಂದ 40 ಮಂದಿ ಸಾವನ್ನಪ್ಪಿದ್ದು 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅದಿಕಾರಿಗಳು ತಿಳಿಸಿದ್ದಾರೆ.

ಮುಸ್ಲಿಂರ ಸಾಂಪ್ರದಾಯಕ ಧಿರಿಸು ಧರಿಸಿದ ಮಹಿಳೆಯೊಬ್ಬಳು, ನಗರದ ಆಹಾರ ವಿತರಣಾ ಕೇಂದ್ರದಲ್ಲಿ ನೆರೆದಿದ್ದ ಜನಜಂಗುಳಿಯಲ್ಲಿ ಎರಡು ಗ್ರೆನೆಡ್‌ಗಳನ್ನು ಎಸೆದು ನಂತರ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾಳೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಫಜಲ್-ಎ-ರಬ್ಬಿ ತಿಳಿಸಿದ್ದಾರೆ.

ಬಾಜೂರ್ ಬುಡಕ್ಕಟು ಸೇರಿದಂತೆ ಸುತ್ತಲಿನ ಪ್ರದೇಶಗಳ ಜನತೆವಿಶ್ವ ಆಹಾರ ಕಾರ್ಯಕ್ರಮದಡಿ ಹಂಚಲಾಗುವ ಆಹಾರ ವಸ್ತುಗಳನ್ನು ಪಡೆಯಲು ಆಹಾರ ವಿತರಣಾ ಕೇಂದ್ರಕ್ಕೆ ಆಗಮಿಸುತ್ತಾರೆ. ಜನಜಂಗುಳಿ ಪ್ರದೇಶವನ್ನು ಗಮನದಲ್ಲಿಟ್ಟುಕೊಂಡು ಆತ್ಮಾಹುತಿ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ 200 ಆತ್ಮಾಹುತಿ ದಾಳಿಗಳು ನಡೆದಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ