ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನೇಪಾಳದಲ್ಲಿ ಮೂವರು ಭಾರತೀಯ ಯುವಕರ ಸೆರೆ (3 Indians | Nepal | bomb ingredient | sulphur | Kathmandu)
Bookmark and Share Feedback Print
 
ಗನ್ ಪೌಡರ್ ತಯಾರಿಸಲು ಸುಮಾರು 120 ಕೆಜಿ ಸಲ್ಫರ್ ಅನ್ನು ಹೊಂದಿರುವ ಮೂವರು ಭಾರತೀಯ ಯುವಕರು ಡಾರ್ಜಿಲಿಂಗ್‌ನಿಂದ ನೇಪಾಳದೊಳಕ್ಕೆ ಪ್ರವೇಶಿಸಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಬಂಧಿತರಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಪೂರ್ವ ನೇಪಾಳದ ಕಾಕರ್‌ಭಿಟ್ಟಾ ಪ್ರದೇಶದಿಂದ ಪ್ರವೇಶಿಸಲು ಯತ್ನಿಸಿದ್ದ ಮನಿಕ್ ರಾಯ್ (23), ಹಾರೇಶ್ ಸಿನ್ನಾ (22) ಹಾಗೂ ಸೋಟೋರ್ ರಾಯ್ (23)ನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಧಿಕಾರಿ ರಬೀಂದ್ರ ಪ್ರಸಾದ್ ಶರ್ಮಾ ನ್ಯೂಸ್ ಏಜೆನ್ಸಿಗೆ ವಿವರಿಸಿದ್ದಾರೆ.

ಈ ಮೂವರು ಗನ್ ಪೌಡರ್ ತಯಾರಿಸಲು ಅಗತ್ಯವಾಗಿರುವ ಸಲ್ಫರ್ ಅನ್ನು ಸೈಕಲಿನಲ್ಲಿ ತೆಗೆದುಕೊಂಡು ಬರುತ್ತಿದ್ದ ವೇಳೆ ಬಂಧಿತರಾಗಿದ್ದಾರೆ. ಅವರು ಡಾರ್ಜಿಲಿಂಗ್‌ನ ಸಿಲಿಗುರಿ ನಿವಾಸಿಗಳೆಂದು ವಿಳಾಸ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದೀಗ ಬಂಧಿತರ ವಿಚಾರಣೆ ಪೂರ್ಣಗೊಳ್ಳುವವರೆಗೆ ಪೊಲೀಸ್ ಕಸ್ಟಡಿಯಲ್ಲಿ ಇರಿಸಿಕೊಳ್ಳುವುದಾಗಿ ತಿಳಿಸಿರುವ ಶರ್ಮಾ, ಅವರ ಹಿನ್ನೆಲೆ, ಸಲ್ಫರ್ ಅನ್ನು ಯಾರಿಗೆ ನೀಡಲು ತಂದಿದ್ದಾರೆ ಎಂಬ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ