ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಿಡ್ನಾಪ್,ಹತ್ಯೆ-ಭಯದಲ್ಲಿ ಪಾಕ್ ಹಿಂದೂಗಳು; ಭಾರತಕ್ಕೆ ಮೊರೆ (Pak Hindus | Kidnapping | killing | political asylum | Baluchistan)
Bookmark and Share Feedback Print
 
ಕಿಡ್ನಾಪ್, ಹತ್ಯೆಯಿಂದಾಗಿ ಕಂಗಾಲಾಗಿರುವ ಪಾಕಿಸ್ತಾನದ ವಿವಾದಿತ ಬಲೂಚಿಸ್ತಾನ್ ಪ್ರಾಂತ್ಯದಲ್ಲಿರುವ ಹಿಂದೂ ಕುಟುಂಬಗಳು ಇದೀಗ ವೀಸಾ ಮತ್ತು ರಾಜಕೀಯ ನೆರವಿಗಾಗಿ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಮನವಿ ಸಲ್ಲಿಸಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.

ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಒಂದು ಶತಮಾನಗಳಿಂದ ವಾಸವಾಗಿರುವ ಸುಮಾರು 27 ಹಿಂದೂ ಕುಟುಂಬಗಳು ಇದೀಗ ರಕ್ಷಣೆಗಾಗಿ ಭಾರತದತ್ತ ಮುಖಮಾಡಿದ್ದಾರೆ. ಈಗಾಗಲೇ ಇಲ್ಲಿನ ಹಿಂದೂಗಳನ್ನು ಅಪಹರಿಸುವುದು, ಒತ್ತೆ ಹಣಕ್ಕೆ ಬೇಡಿಕೆ ಇಡುವುದು ಹಾಗೂ ಹತ್ಯೆಗೈಯುವ ಘಟನೆ ಹೆಚ್ಚಳವಾಗುತ್ತಿದೆ. ಅಷ್ಟೇ ಅಲ್ಲ ಹಿಂದೂಗಳು ಭಾರತಕ್ಕೆ ತೆರಳಬೇಕು ಎಂಬ ಒತ್ತಡ ಕೂಡ ಹೆಚ್ಚುತ್ತಿದೆಯಂತೆ.

ಮಾನವ ಹಕ್ಕು ಫೆಡರಲ್ ಸಚಿವಾಲಯದ ರೀಜನಲ್ ನಿರ್ದೇಶಕ ಸಯೀದ್ ಅಹ್ಮದ್ ಖಾನ್ ಈ ಬಗ್ಗೆ ಮಾಹಿತಿಯನ್ನು ನೀಡಿರುವುದಾಗಿ ವರದಿ ತಿಳಿಸಿದೆ. ಆ ನಿಟ್ಟಿನಲ್ಲಿ ಬಲೂಚಿಸ್ತಾನದಲ್ಲಿರುವ 27 ಹಿಂದೂ ಕುಟುಂಬಗಳು ಭಾರತದ ವೀಸಾಕ್ಕಾಗಿ ಇಲ್ಲಿನ ರಾಯಭಾರಿ ಕಚೇರಿಗೆ ಅರ್ಜಿ ಸಲ್ಲಿಸಿರುವುದಾಗಿ ಖಾನ್ ತಿಳಿಸಿರುವುದಾಗಿ ವರದಿ ಹೇಳಿದೆ. ಇದೊಂದು ತುಂಬಾ ಗಂಭೀರವಾದ ಪ್ರಕರಣವಾಗಿದ್ದು, ಬಲೂಚಿಸ್ತಾನದಲ್ಲಿನ ಕಾನೂನು ಸುವ್ಯವಸ್ಥೆ ಕುರಿತಂತೆ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

ಅಷ್ಟೇ ಅಲ್ಲ ಬಲೂಚಿಸ್ತಾನದಲ್ಲಿ ಹಣಕ್ಕಾಗಿ ಜನರನ್ನು ಅಪಹರಿಸುವ ಪ್ರಕರಣ ಹೆಚ್ಚಳವಾಗುತ್ತಿರುವ ಬಗ್ಗೆಯೂ ಮಾನವ ಹಕ್ಕು ಸಚಿವಾಲಯದ ಅಂಕಿ-ಅಂಶ ಹೆಚ್ಚಿನ ಕಳವಳ ಮೂಡಿಸುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ