ಸೂಟ್ಕೇಸ್ವೊಂದರಲ್ಲಿ ಮಹಿಳೆಯ ಶವವೊಂದು ದೊರೆತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರ್ವ ಹಾರ್ಲೆಮ್ನ ವ್ಯಕ್ತಿಯೊಬ್ಬನನ್ನು ನ್ಯೂಯಾರ್ಕ್ ಪೊಲೀಸರು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಡಿಸೆಂಬರ್ 22ರಂದು ದಾರಿಹೋಕನೊಬ್ಬ ಪೂರ್ವ 114 ರೆಸಿಡೆನ್ಸಿಷಿಯಲ್ ಸ್ಟ್ರೀಟ್ ಹೊರಭಾಗದಲ್ಲಿ ನಡೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ದೊಡ್ಡದೊಂದು ಸೂಟ್ಕೇಸ್ವೊಂದನ್ನು ಗಮನಿಸಿ ಅದನ್ನು ತೆರಿದಿದ್ದ. ಅದರಲ್ಲಿ ಮಹಿಳೆಯ ಶವವಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದ.
ನಂತರ ಪೊಲೀಸರು ಆ ಮಹಿಳೆಯ ಶವವನ್ನು ಆಸ್ಪತ್ರೆಗೆ ಸಾಗಿಸಿ ಪೋಸ್ಟ್ ಮಾರ್ಟಮ್ ಮಾಡಿಸಿದ್ದರು. ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂಬ ಅಂಶ ಬಯಲಾಗಿತ್ತು. ಆ ಮಹಿಳೆಯನ್ನು ಬೆಟ್ಟೈ ವಿಲಿಯಮ್ಸ್ (28) ಎಂದು ಗುರುತು ಪತ್ತೆ ಹಚ್ಚಲಾಗಿದೆ. ಆದರೆ ಆಕೆಯನ್ನು ಕೊಂದು ಸೂಟ್ಕೇಸ್ನಲ್ಲಿ ಶವ ಹಾಕಿದ ವ್ಯಕ್ತಿ ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದರು.
ಕೊನೆಗೂ ಹಂತಕ ಹಸ್ಸನ್ ಮಲಿ(55) ವ್ಯಕ್ತಿಯನ್ನು ಪೊಲೀಸರು ಸೆರೆ ಹಿಡಿದು ವಿಚಾರಣೆ ನಡೆಸಿದಾಗ, ವಿಷಯವನ್ನು ಬಾಯ್ಬಿಟ್ಟಿದ್ದ. ಇದೀಗ ಆತನ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಿದ್ದಾರೆ.